ದೇಶ

ತಾಕತ್ತಿದ್ದರೆ ಕೋರ್ಟ್ ಗೆ ಹೋಗಿ ಬಹುಮತ ಸಾಬೀತುಪಡಿಸಿ: ಮೆಹೂಬೂಬ್ ಮುಫ್ತಿಗೆ ಸಜದ್ ಲೋನ್ ಸವಾಲು

Shilpa D
ಶ್ರೀನಗರ: ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ  ನಾಯಕಿ ಮೆಹಬೂಬ್ ಮುಫ್ತಿ, ತಾಕತ್ತಿದ್ದರೇ ಕೋರ್ಟ್ ಗೆ ಹೋಗಿ ಜಮ್ಮು ಕಾಶ್ಮೀರ ವಿಧಾನಸಭೆಯ ಬಹುಮತ ಸಾಬೀತು ಪಡಿಸಲಿ ಎಂದು ಪೀಪಲ್ಸ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಸಜದ್ ಗನಿ ಲೋನ್ ಸವಾಲು ಹಾಕಿದ್ದಾರೆ.
ಒಂದು ವೇಳೆ ಅವರು ಕೋರ್ಟ್ ಗೆ ಹೋಗಬಹುದು, ಆದರೇ ಅವರಿಗೆ ಸರ್ಕಾರ ರಚಿಸುವಷ್ಟು ಪ್ರಮಾಣದಲ್ಲಿ ಶಾಸಕರ ಸಂಖ್ಯೆಯಿಲ್ಲ, ನಮ್ಮ ಬಳಿ ಅಗತ್ಯ ಸಂಖ್ಯೆಯಿದೆ ಎಂದು ನಾವುಹೇಳಿದ್ದೇವೆ, ಬಹುಮತ ಸಾಬೀತಿಗೆ ಅವಕಾಶ ನೀಡಿದರೇ ಅಗತ್ಯವಾದ ಸಂಖ್ಯೆಯನ್ನು ನಾವು ತರುತ್ತೇವೆ,ಅದನ್ನು ನಾವು ಸಂವಿಧಾನದ ವ್ಯಾಪ್ತಿಯೊಳಗೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಮಹೆಬೂಬಾ ಮುಫ್ತಿ ಅವರು ಹೊಸ ಮೈತ್ರಿ ಕೂಟದೊಂದಿಗೆ ಸರ್ಕಾರ ರಚನೆ ಮಾಡುವುದಾಗಿ ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಿದ್ದರು. ಕಾಂಗ್ರೆಸ್ ಬೆಂಬಲ ಇರುವುದಾಗಿ ಅವರು ಮನವಿ ಪತ್ರ ಸಲ್ಲಿಸಿದ್ದರು. ಜಮ್ಮು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ನ ಮುಖ್ಯಸ್ಥ ಸಜದ್ ಲೋನ್ ಅವರು ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸುವ ಇರಾದೆಯಲ್ಲಿದ್ದರು. ಆದರೆ, ರಾಜ್ಯಪಾಲರು ಇಬ್ಬರ ಆಸೆಗೂ ತಣ್ಣೀರೆರಚಿದ್ದು, ಜಮ್ಮುಮತ್ತು ಕಾಶ್ಮೀರದಲ್ಲಿನ ವಿಧಾನಸಭೆಯನ್ನು ಅಲ್ಲಿನ ರಾಜ್ಯಪಾಲ ಸತ್ಯಪಾಲ್ ವಿಸರ್ಜನೆ ಮಾಡಿದ್ದಾರೆ. 
SCROLL FOR NEXT