ಜೈಪುರ: ಪಕ್ಷಕ್ಕೆ ಸೆಡ್ಡು ಹೊಡೆದು ನಾಮಪತ್ರ ಸಲ್ಲಿಸಿದ್ದ ವಸುಂದರಾ ರಾಜೇ ಸಂಪುಟದ 4 ಸಚಿವರು ಸೇರಿದಂತೆ 11 ಬಂಡಾಯಗಾರರನ್ನು ರಾಜಸ್ತಾನ ಬಿಜೆಪಿ ವಜಾಗೊಳಿಸಿದೆ,
ಮುಂಬರುವ ರಾಜಸ್ತಾನ ವಿಧಾನಸಭೆ ಚುನಾವಣೆಗೆ ಬಿಜೆಪಿ ಕೆಲ ಅಭ್ಯರ್ಥಿಗಳನ್ನ ಆಯ್ಕೆ ಮಾಡಿತ್ತು, ಆದರೆ ಅವರಿಗೆ ಅವಕಾಶ ನೀಡದೇ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು, ಹೀಗಾಗಿ 11 ಮಂದಿಯನ್ನು ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ,
ಡಿಸೆಂಬರ್ 7 ರಂದು ರಾಜಸ್ತಾನ ವಿಧಾನಸಭೆಗೆ ಚುನಾವಣೆ ನಡೆಯಲಿದೆ, ಸುರೇಂದ್ರ ಗೋಯಲ್, ಲಕ್ಷ್ಮಿ ನಾರಾಯಣ್ ದೇವ್, ಸೇರಿದಂತೆ 11 ಮಂದಿಯನ್ನು ವಜಾಗೊಳಿಸಲಾಗಿದೆ. ವಸುಂದರಾ ರಾಜೆ ಅವರಿಗೆ ಬಿಜೆಪಿ ಭಿನ್ನಮತೀಯರು ಭಾರೀ ಪ್ರಮಾಣದಲ್ಲಿ ಮುಜುಗರ ಉಂಟು ಮಾಡಿದ್ದಾರೆ. ಭಿನ್ನಮತೀಯರು ಕೇವಲ ಬಿಜೆಪಿಯಲ್ಲಿ ಮಾತ್ರವಲ್ಲ, ಕಾಂಗ್ರೆಸ್ ನಲ್ಲೂ ಕೂಡ ಇದ್ದುಸ ಅಲ್ಲೂ ಕೂಡ ಬಂಡಾಯದ ಭಾವುಟ ಹಾರಿಸಿದ್ದಾರೆ.