ಕೊಚ್ಚಿ: ಶಬರಿಮಲೆ ಅಯ್ಯಪ್ಪ ದರ್ಶನ ಪಡೆಯಲು ಎಲ್ಲಾ ವಯೋಮಾನದ ಮಹಿಳೆಯರಿಗೆ ಅವಕಾಶ ಕೊಟ್ಟ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಿಂದ ಉದ್ಭವವಾಗಿರುವ ಬಿಕ್ಕಟ್ಟು, ಶೀಘ್ರವೇ ಇನ್ನೊಂದು ಮಹತ್ವದ ಘಟ್ಟ ತಲುವ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ.
ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ, ಇದೂವರೆಗೆ 10-50ರ ವಯೋಮಾನದ ಮಹಿಳೆಯರಿಗೆ ಅಯ್ಯಪ್ಪನ ದರ್ಶನ ಸಾಧ್ಯವಾಗದ ಹಿನ್ನಲೆಯಲ್ಲಿ ಎರಡು ದಿನವನ್ನು ಮಾತ್ರ ಮಹಿಳಾ ಭಕ್ತರ ಪ್ರವೇಶಕ್ಕೆಂದೇ ಮೀಸಲಿಡಲು ಸಿದ್ಧವಿರುವುದಾಗಿ ಕೇರಳ ಸರ್ಕಾರ, ರಾಜ್ಯ ಹೈಕೋರ್ಟ್'ಗೆ ಶುಕ್ರವಾಹ ಮಾಹಿತಿ ನೀಡಿದೆ.
ರಾಜ್ಯ ಸರ್ಕಾರದ ಈ ಕ್ರಮಕ್ಕೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುವುದು ಬಹುತೇಕ ಖಚಿತವಾಗಿರುವ ಹಿನ್ನಲೆಯಲ್ಲಿ, ಈಗಾಗಲೇ ಉದ್ವಿಗ್ನ ಸ್ಥಿತಿ ನೆಲೆಸಿರುವ ಶಬರಿಮಲೆ ಸುತ್ತಮುತ್ತಲ ಪ್ರದೇಶ ಹಾಗೂ ಕೇರಳದ ಹಲವು ಭಾಗಗಳು ಮತ್ತೊಮ್ಮೆ ಹೋರಾಟಕ್ಕೆ ವೇದಿಕೆಯಾಗುವ ಎಲ್ಲಾ ಸಾಧ್ಯತೆಗಳೂ ಕಂಡು ಬಂದಿವೆ.
ಪ್ರತಿಭಟನೆ ಹಿನ್ನಲೆಯಲ್ಲಿ ಇದೂವರೆಗೆ ಅಯ್ಯಪ್ಪ ದರ್ಶನ ಸಾಧ್ಯವಾಗ ಹಿನ್ನಲೆಯಲ್ಲಿ ಕೆಲ ಮಹಿಳೆಯರು ನಿನ್ನೆಯಷ್ಟೇ ಕೇರಳ ಹೈಕೋರ್ಟ್'ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯಲ್ಲಿ ಶಬರಿಮಲೆ ಸುತ್ತಮುತ್ತಲ ಪ್ರದೇಶದಿಂದ ಪ್ರತಿಭಟನಾನಿರತರನ್ನು ತೆರವುಗೊಳಿಸಬೇಕು. ಮಹಿಳೆಯರ ಪ್ರವೇಶಕ್ಕೆ ವಿಶೇಷ ಭದ್ರತೆಯೊದಗಿಸಬೇಕೆಂದು ಕೇಳಿದ್ದರು. ಮಹಿಳೆಯರ ಪ್ರವೇಶಕ್ಕೆಂದೇ 3 ದಿನ ಮೀಸಡಬೇಕೆಂದೂ ಕೂಡ ಕೋರಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇರಳ ಸರ್ಕಾರ, 3 ದಿನ ಮೀಸಲಿಡಲು ಸಾಧ್ಯವಿಲ್ಲ. 2 ದಿನವನ್ನು ಮಹಿಳೆಯರಿಗೆ ಮೀಸಲಿಡಲು ಸಿದ್ಧ ಎಂದು ಘೋಷಣೆ ಮಾಡಿದೆ. ಈ ವೇಳೆ ಮಧ್ಯ ಪ್ರವೇಶ ಮಾಡಿರುವ ನ್ಯಾಯಾಲಯ, ಈ ಸಂಬಂಧ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ ಪ್ರಕರಣವನ್ನು ಮುಂದೂಡಿತು.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಶಬರಿಮಲೆಯಲ್ಲಿ 2 ದಿನ ಮಹಿಳೆಯರಿಗೇ ಮಾತ್ರವೇ ಪ್ರವೇಶ ಕುರಿತು ನ್ಯಾಯಾಲಯವೇ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos