ಅಯೋಧ್ಯೆ ಧರ್ಮ ಸಭಾ ಅಂತ್ಯ: ರಾಮ ಮಂದಿರದ ಬಗ್ಗೆ ಯಾರು ಏನೇನು ಹೇಳಿದರು, ಇಲ್ಲಿದೆ ಮಾಹಿತಿ
ಅಯೋಧ್ಯೆ: ಅಯೋಧ್ಯೆಯಲ್ಲಿ ನ.25 ರಂದು ನಡೆದ ಧರ್ಮಸಭಾ ಕಾರ್ಯಕ್ರಮ ಅಂತ್ಯಗೊಂಡಿದ್ದು, ರಾಮ ಮಂದಿರ ನಿರ್ಮಾಣಕ್ಕಾಗಿ ಬೇಡಿಕೆಯನ್ನು ಮುಂದುವರೆಸಲು ವಿಶ್ವಹಿಂದೂ ಪರಿಷತ್ ನಿರ್ಧರಿಸಿದೆ.
ಮಂತ್ರ ಘೋಷಗಳೊಂದಿಗೆ ಪ್ರಾರಂಭವಾದ ಧರ್ಮಸಭಾ ಕಾರ್ಯಕ್ರಮದಲ್ಲಿ 3 ಲಕ್ಷ ಭಕ್ತಾದಿಗಳು ಭಾಗವಹಿಸಿದ್ದು, ರಾಮಜನ್ಮಭೂಮಿಯಲ್ಲೇ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಪಟ್ಟನ್ನು ಮುಂದುವರೆಸಲು ವಿಶ್ವಹಿಂದೂ ಪರಿಷತ್ ನಿರ್ಧರಿಸಿದೆ.
ಇದೇ ವೇಳೆ ಮಾತನಾಡಿರುವ ಪ್ರಗತಿಶೀಲ್ ಸಮಾಜವಾದಿ ಪಕ್ಷ ಲೋಹಿಯಾದ ನಾಯಕ ಶಿವ್ ಪಾಲ್ ಯಾದವ್, ರಾಮಜನ್ಮಭೂಮಿ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ, ಸರ್ಕಾರ ಒಂದೋ ಒಮ್ಮತ ಮೂಡಿಸಬೇಕು ಅಥವಾ ಸುಪ್ರೀಂ ಕೋರ್ಟ್ ಆದೇಶಕ್ಕಾಗಿ ಕಾಯಬೇಕು. ಸರ್ಕಾರದ ಬಳಿ ಸಾಕಷ್ಟು ಜಾಗಗಳಿವೆ ರಾಮ ಮಂದಿರವನ್ನು ಸರಯೂ ನದಿ ತೀರದಲ್ಲಿ ಎಲ್ಲಿ ಬೇಕಾದರೂ ನಿರ್ಮಾಣ ಮಾಡಬಹುದು, ವಿವಾದಿತ ಪ್ರದೇಶದಲ್ಲಿ ಮಂದಿರ ನಿರ್ಮಾಣದ ಬಗ್ಗೆ ಮಾತುಕತೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.