ಸಾಂದರ್ಭಿಕ ಚಿತ್ರ 
ದೇಶ

ವೆಚ್ಚ ಕಡಿತ: ಮತ್ತೆ 16 ನೌಕರರನ್ನು ಮನೆಗೆ ಕಳುಹಿಸಿದ ಜೆಟ್ ಏರ್ ವೇಸ್

ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಥೆ ವೆಚ್ಚ ಕಡಿತಗೊಳಿಸಲು ಮತ್ತೆ 16 ನೌಕರರನ್ನು ಕೆಲಸದಿಂದ ತೆಗೆದುಹಾಕಿದೆ ಎಂದು ಸೋಮವಾರ ಮೂಲಗಳು ತಿಳಿಸಿವೆ.

ಮುಂಬೈ: ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಥೆ ವೆಚ್ಚ ಕಡಿತಗೊಳಿಸಲು ಮತ್ತೆ 16 ನೌಕರರನ್ನು ಕೆಲಸದಿಂದ ತೆಗೆದುಹಾಕಿದೆ ಎಂದು ಸೋಮವಾರ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಕೊಚ್ಚಿ ಮತ್ತು ಹೈದರಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದ 16 ಕೆಳ ಹಂತದ ಸಿಬ್ಬಂದಿಯನ್ನು ಜೆಟ್ ಏರ್ ವೇಸ್ ವಜಾಗೊಳಿಸಿದೆ.
ಜೆಟ್ ಏರ್ ವೇಸ್ ವೆಚ್ಚ ಕಡಿತದ ಭಾಗವಾಗಿ ಕಳೆದು ತಿಂಗಳು ಕೆಲವು ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ 20 ನೌಕರರನ್ನು ವಜಾಗೊಳಿಸಿತ್ತು. 
ನರೇಶ್ ಗೋಯಲ್ ಮಾಲೀಕತ್ವದ ಜೆಟ್ ಏರ್ ವೇಸ್ 124 ವಿಮಾನಗಳನ್ನು ಹೊಂದಿದ್ದು, ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.
ಹೆಚ್ಚುತ್ತಿರುವ ತೈಲ ಬೆಲೆ, ತೈಲದ ಮೇಲಿನ ತೆರಿಗೆ ಹೆಚ್ಚಳ, ದುರ್ಬಲ ರುಪಾಯಿ ಮೌಲ್ಯ, ಕಡಿಮೆ ಪ್ರಯಾಣ ದರ ಹಾಗೂ ದರ ಸ್ಪರ್ಧೆ ಇವೆಲ್ಲವೂ ಸೇರಿಕೊಂಡು ಜೆಟ್ ಏರ್ ವೇಸ್  ನಷ್ಟ ಅನುಭವಿಸುವಂತೆ ಮಾಡಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್-ಅಮೆರಿಕವನ್ನ ಕ್ಷಮಿಸೋ ಮಾತೇ ಇಲ್ಲ.. ಆದರೆ...': ನೆರೆಹೊರೆ ರಾಷ್ಟ್ರಗಳ ಕ್ಷಮೆ ಕೋರಿದ Iran

'ಅದು ಮಾನವೀಯ ಕೆಲಸ.. ನಾವು ಸರಿಯಾದ್ದನ್ನೇ ಮಾಡಿದ್ದೆವು': Iran ನೌಕೆಗೆ ಪ್ರವೇಶ ನೀಡಿದ ಕುರಿತು EAM Jaishankar ಹೇಳಿಕೆ!

ರಾಹುಲ್ ಗಾಂಧಿ ರಾಜಕೀಯಕ್ಕೆ ಬರದಿದ್ದರೆ ಏನು ಮಾಡುತ್ತಿದ್ದರು ಗೊತ್ತಾ? ಇಲ್ಲಿದೆ ಅಚ್ಚರಿಯ ಉತ್ತರ

ಕೊಚ್ಚಿಯ ಬಂದರಿನಲ್ಲಿ ಇರಾನಿನ ನೌಕಾ ಹಡಗು ನಿಲ್ಲಿಸಲು ಅನುಮತಿ: ಎಸ್. ಜೈಶಂಕರ್ ಹೇಳಿದ್ದು ಏನು?

T20 ವಿಶ್ವಕಪ್ 2026: ಸತತ 2ನೇ ಬಾರಿಗೆ ಫೈನಲ್, ಅಪರೂಪದ ದಾಖಲೆ ಬರೆದ ಭಾರತ, ಎಲೈಟ್ ಗ್ರೂಪ್ ಸೇರ್ಪಡೆ!

SCROLL FOR NEXT