ದೇಶ

ಕರ್ತಾರ್ ಪುರ ಕಾರಿಡಾರ್ ನ್ನು ಸುಬ್ರಹ್ಮಣಿಯನ್ ಸ್ವಾಮಿ ಅಪಾಯಕಾರಿ ಅಂದಿದ್ದೇಕೆ?: ಇಲ್ಲಿದೆ ಮಾಹಿತಿ

Srinivas Rao BV
ನವದೆಹಲಿ: ಕರ್ತಾರ್ಪುರ ಕಾರಿಡಾರ್ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಂಡಿರುವ ಕೇಂದ್ರ ಸರ್ಕಾರದ  ನಡೆಯನ್ನು ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ವಿರೋಧಿಸಿದ್ದಾರೆ. 
ಕಾರಿಡಾರ್ ನಿರ್ಮಾಣವಾದರೂ ಸಹ ಪಾಕಿಸ್ತಾನದ ಜನ ಭಾರತಕ್ಕೆ ಬರುವುದಕ್ಕೆ ಅವಕಾಶ ನೀಡಬಾರದು ಎಂದು ಸುಬ್ರಹ್ಮಣಿಯನ್ ಸ್ವಾಮಿ ಸಲಹೆ ನೀಡಿದ್ದು, ಕರ್ತಾರ್ ಪುರ ಕಾರಿಡಾರ್ ನ್ನು ತೆರೆಯುವುದು ಅಪಾಯಕಾರಿ ನಡೆ ಎಂದು ವಿಶ್ಲೇಷಿಸಿದ್ದಾರೆ. 
ಸರಿಯಾಗಿ ನಿಗಾ ವಹಿಸದೇ ಇದ್ದರೆ ಕರ್ತಾರ್ ಪುರ ಕಾರಿಡಾರ್ ಅಪಾಯಕ್ಕೆ ಆಹ್ವಾನ ನೀಡಿದಂತೆ, ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿರುವ ಸುಬ್ರಹ್ಮಣಿಯನ್ ಸ್ವಾಮಿ,  ಕೇವಲ ಪಾಸ್ಪೋರ್ಟ್ ನ್ನು ತೋರಿಸುವುದು ಸೂಕ್ತ ಎಚ್ಚರಿಕೆ ಕ್ರಮ ಎಂದು ಅನಿಸುವುದಿಲ್ಲ ಚಾಂದ್ನಿ ಚೌಕ್ ನಲ್ಲಿ 250 ರೂಪಾಯಿಗಳಿಗೆ ಸಿಗುತ್ತದೆ. ಪಾಕಿಸ್ತಾನದವರು ಇಲ್ಲಿಗೆ ಬರುವುದಕ್ಕೆ ಅವಕಾಶ ನೀಡಬಾರದು ಎಂದು ಸ್ವಾಮಿ ಹೇಳಿದ್ದಾರೆ. 
ಇದೇ ವೇಳೆ ಕರ್ತಾರ್ ಪುರ್ ಕಾರಿಡಾರ್ ಗೆ ಪಾಕ್ ನಲ್ಲಿ ಶಿಲಾನ್ಯಾಸ ನೆರವೇರಿಸ ಕಾರ್ಯಕ್ರಮಕ್ಕೆ ಭಾರತದ ಯಾವೊಬ್ಬ ಸಚಿವನೂ ಸಹ ಆಹ್ವಾನವನ್ನು ಒಪ್ಪಿಕೊಳ್ಳಬಾರದು ಎಂದು ಸ್ವಾಮಿ ಹೇಳಿದ್ದಾರೆ.
SCROLL FOR NEXT