ದೇಶ

ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಸುನೀಲ್ ಅರೋರಾ ನೇಮಕ

Raghavendra Adiga
ನವದೆಹಲಿ: ಭಾರತದ ಮುಖ್ಯ ಚುನಾವಣಾ ಆಯುಕ್ತರ ಸ್ಥಾನಕ್ಕೆ ಸುನೀಲ್ ಅರೋರಾ ಅವರ ಹೆಸರು ಅಂತಿಮಗೊಂಡಿದೆ. ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ಒ.ಪಿ. ರಾವತ್ ಅವರ ಅಧಿಕಾರಾವಧಿ ಡಿಸೆಂಬರ್ 1ಕ್ಕೆ ಕೊನೆಗೊಳ್ಳುತ್ತಿದ್ದು ರಾವತ್ ಸ್ಥಾನದಲ್ಲಿ ಅರೋರಾ ಆಡಳಿತ ವಹಿಸಿಕೊಳ್ಳಲಿದ್ದಾರೆ.
1980ರ ರಾಜಸ್ಥಾನ ಕೇಡರ್ಸ್ ನ ಹಿರಿಯ ಅಧಿಕಾರಿಯಾಗಿರುವ ಸುನೀಲ್ ಅರೋರಾ ಪ್ರಸ್ತುತ ಚುನಾವಣಾ ಆಯೋಗದಲ್ಲಿ ಹಿರಿಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅರೋರಾ ಡಿಸೆಂಬರ್ 2ರಂದು ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇವರು ಮುಂಬರುವ 2019ರ ಲೋಕಸಭಾ ಚುನಾವಣೆ ನಡೆಸುವ ಸಂಪೂರ್ಣ ಹೊಣೆಗಾರಿಕೆಯನ್ನು ಹೊರಲಿದ್ದಾರೆ ಎಂದು ಮಾದ್ಯಮಗಳು ವರದಿ ಮಾಡಿದೆ.
SCROLL FOR NEXT