ದೇಶ

ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದ ರೆಹಾನಾಗೆ ಬಿಎಸ್ ಎನ್ ಎಲ್ ಗೇಟ್ ಪಾಸ್!

Srinivasamurthy VN
ಕೊಚ್ಚಿ: ಖ್ಯಾತ ಪವಿತ್ರ ಯಾತ್ರಾ ಸ್ಥಳ ಶಬರಿಮಲೆಗೆ ತೆರಳಲು ಯತ್ನಿಸಿ ಅಯ್ಯಪ್ಪ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಗೆ ಬಿಎಸ್ ಎನ್ ಎಲ್ ಶಾಕ್ ನೀಡಿದ್ದು, ಆಕೆಯ ಕೆಲಸದಿಂದ ಆಕೆಯನ್ನು ಅಮಾನತು ಮಾಡಿದೆ.
ಈ ಹಿಂದೆ ಶಬರಿಮಲೆ ಪ್ರವೇಶಿಸಲು ಮುಂದಾಗಿದ್ದ ಕಿಸ್​ ಆಫ್​ ಲವ್ ನ ಆಯೋಜಕಿ, ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾಳನ್ನು ಬಿಎಸ್ ಎನ್ ಎಲ್ ಸಂಸ್ಥೆ ಕೆಲಸದಿಂದ ಅಮಾನತು ಮಾಡಿದೆ. ಶಬರಿಮಲೆ ಕುರಿತಂತೆ ಫೇಸ್ ಬುಕ್ ಪೋಸ್ಟ್ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ರೆಹಾನಾ ಫಾತಿಮಾ ಬಂಧನಕ್ಕೀಡಾಗಿದ್ದು, ಇದರ ಬೆನ್ನಲ್ಲೇ ಬಿಎಸ್ ಎನ್ ಎಲ್ ಸಂಸ್ಥೆ ಕೂಡ ಆಕೆಯನ್ನು ಕೆಲಸದಿಂದ ಅಮಾನತು ಮಾಡಿದೆ. 
ಫಾತಿಮಾ ಕೊಚ್ಚಿ ಶಾಖೆಯಲ್ಲಿ ಗ್ರಾಹಕ ಸಂಪರ್ಕ ವಿಭಾಗದ ಟೆಲಿಕಾಂ ತಂತ್ರಜ್ಞಳಾಗಿ ಕೆಲಸ ಮಾಡುತ್ತಿದ್ದಳು. ಶಬರಿಮಲೆ ವಿವಾದದ ಬಳಿಕ ಆಕೆಯನ್ನು ಸಾರ್ವಜನಿಕ ಸಂಪರ್ಕ ಅಗತ್ಯವೇ ಇಲ್ಲದ ಪಳರಿವತ್ತಮ್ ದೂರವಾಣಿ ವಿನಿಮಯ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು. ರೆಹಾನಾ ವರ್ಗಾವಣೆ ವಿಚಾರ ತಿಳಿಯುತ್ತಿದ್ದಂತೆ ಶಬರಿಮಲೆ ಕರ್ಮ ಸಮಿತಿ ಪಳರಿವತ್ತಮ್​ ಬಿಎಸ್​ಎನ್​ಎಲ್​ ಕೇಂದ್ರದ ಬಳಿ ಪ್ರತಿಭಟನೆ ನಡೆಸಿ, ಆಕೆಯನ್ನು ಅಲ್ಲಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿತ್ತು. 
ಶಬರಿಮಲೆ ದೇಗುವ ಪ್ರವೇಶಿಸಲು ಪ್ರಯತ್ನಿಸಿ ವಿಫಲವಾಗಿದ್ದ ರೆಹಾನಾ ಫಾತಿಮಾ ಮನೆಯನ್ನು ದುಷ್ಕರ್ಮಿಗಳು ಈಗಾಗಲೇ ಧ್ವಂಸಗೊಳಿಸಿದ್ದರು. ಅಲ್ಲದೆ ಆಕೆ ಲಕ್ಷಾಂತರ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಮೇಲೆ ಎರಡು ದಿನಗಳ ಹಿಂದೆ ಕೇರಳ ಮುಸ್ಲಿಂ ಜಮಾತ್ ಪರಿಷತ್ ಮುಸ್ಲಿಂ ಸಮುದಾಯದಿಂದ ಉಚ್ಚಾಟನೆ ಮಾಡಿತ್ತು.
SCROLL FOR NEXT