ನವದೆಹಲಿ: ಕರ್ತಾರ್ ಪುರ ಕಾರಿಡಾರ್ ಗೆ ಪಾಕಿಸ್ತಾನ ಸರ್ಕಾರ ನೆರವೇರಿಸಿದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಬಗ್ಗೆ ಪಾಕ್ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ ನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗ ನವಜೋತ್ ಸಿಂಗ್ ಸಿಧು ಎದುರಿಸಿದ್ದ ಟೀಕೆಗಳ ಬಗ್ಗೆಯೂ ಇಮ್ರಾನ್ ಖಾನ್ ಪ್ರತಿಕ್ರಿಯೆ ನೀಡಿದ್ದು, ನವ್ ಜೋತ್ ಸಿಂಗ್ ಸಿಧು ವಿರುದ್ಧ ಏಕೆ ಟೀಕೆಗಳು ಬಂದವೋ ಗೊತ್ತಿಲ್ಲ ಸಿಧು ಶಾಂತಿ ಮತ್ತು ಸಹೋದರತ್ವದ ಬಗ್ಗೆ ಮಾತನಾಡುತ್ತಿದ್ದರು. ಪಾಕಿಸ್ತಾನದಲ್ಲಿ ಸಿಧು ಚುನಾವಣೆ ಎದುರಿಸಲಿ ಅವರು ಗೆಲ್ಲುತ್ತಾರೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಭಾರತ ಸ್ನೇಹಹಸ್ತ ಚಾಚಲು ಒಂದು ಹೆಜ್ಜೆ ಮುಂದಿಟ್ಟರೆ ಪಾಕಿಸ್ತಾನ 2 ಹೆಜ್ಜೆ ಮುಂದಿಡಲು ಸಿದ್ಧವಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.