ಸಂಗ್ರಹ ಚಿತ್ರ 
ದೇಶ

ತೆಲಂಗಾಣ ಚುನಾವಣೆ: ವೈರತ್ವ ಬದಿಗೊತ್ತಿ, ಕೈಜೋಡಿಸಿದ ರಾಹುಲ್-ಚಂದ್ರಬಾಬು ನಾಯ್ಡು

36 ವರ್ಷಗಳ ಶತ್ರುತ್ವವನ್ನು ಬದಿಗೊತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು, ತೆಲಂಗಾಣ ಚುನಾವಣೆಗೆ ಭಾರೀ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ...

ನವದೆಹಲಿ: 36 ವರ್ಷಗಳ ಶತ್ರುತ್ವವನ್ನು ಬದಿಗೊತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು, ತೆಲಂಗಾಣ ಚುನಾವಣೆಗೆ ಭಾರೀ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. 
ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಹಾಗೂ ಚಂದ್ರಬಾಬು ನಾಯ್ಡು ಅವರು ಜಂಟಿಯಾಗಿ ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದಾರೆ. 
ತೆಲುಗು ದೇಶಂ ಪಕ್ಷವನ್ನು, ಕಾಂಗ್ರೆಸ್ ವಿರುದ್ಧ ಹೋರಾಡಲು ಚಂದ್ರಬಾಬು ನಾಯ್ಡು ಅವರ ಮಾವ ಎನ್.ಟಿ.ರಾಮ ರಾವ್ ಅವರು ಸ್ಥಾಪನೆ ಮಾಡಿದ್ದರು. ಇದರಂತೆ ರಾಹುಲ್ ಹಾಗೂ ನಾಯ್ಡು ಇಬ್ಬರೂ ಬದ್ಧ ವೈರಿಗಳಂತೆಯೇ ಇದ್ದರು. ಆದರೆ, 36 ವರ್ಷಗಳ ವೈರತ್ವವನ್ನು ಬದಿಗೊತ್ತಿರುವ ಇಬ್ಬರೂ ನಾಯಕರೂ ಇದೀಗ ಚಂದ್ರಶೇಖರ್ ರಾವ್ ಅವರನ್ನು ಸೋಲಿಸುವ ಸಲುವಾಗಿ ಕೈಜೋಡಿಸಿದ್ದಾರೆ. 
ಮಹಬೂಬ್ ನಗರ ಜಿಲ್ಲೆಯ ಕೊಸ್ಗಿಯಲ್ಲಿ ಸಾರ್ವಜನಿಕ ಸಭೆಯೊಂದು ನಡೆಯಲಿದ್ದು, ಈ ಸಭೆಯಲ್ಲಿ ಇಬ್ಬರೂ ನಾಯಕರು ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. 
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ತೆಲಂಗಾಣ ಟಿಡಿಪಿ ಅಧ್ಯಕ್ಷ, ಎರಡು ಪಕ್ಷಗಳ ಕೆಟ್ಟ ರಕ್ತ ಇದೀಗ ಸೇತುವೆ ಕೆಳಗೆ ನೀರಾಗಿದೆ. ಇಬ್ಬರೂ ನಾಯಕರು ಭಿನ್ನತೆಗಳನ್ನು ಬದಿಗೊತ್ತಿ, ಟಿಆರ್'ಎಸ್ ವಿರುದ್ದ ಹೋರಾಡಲು ಕೈಜೋಡಿಸಿವೆ. ಕಾಂಗ್ರೆಸ್ ಹಾಗೂ ಟಿಡಿಪಿ ನಡುವಿನ ದೋಸ್ತಿ ಸ್ವಾಗತಾರ್ಹ. ಇದೀಗ ಸೋಲಿಗಾಗಿ ಟಿಆರ್'ಎಸ್ ಮುಖ್ಯಸ್ಥ ಕೆಸಿಆರ್ ಕೂಡ ಭೀತಿಗೊಳಗಾಗಿದ್ದಾರೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ