ನವದೆಹಲಿ: ಬಿಕೆಪಿ ಸರ್ಕಾರದ ನೋಟು ನಿಷೇಧ ಕ್ರಮ ಒಂದು ದುರುದ್ದೇಶಪೂರಿತ ಕ್ರಮವಾಗಿದೆ, ಇದು ಬಿಜೆಪಿ ಸರ್ಕಾರದ ಅಕ್ರಮ ಹಣ ವರ್ಗಾವಣೆ ಹಗರಣ ಸಹ ಹೌದು ಹೀಗಾಗಿ ಕೇಂದ್ರದಲ್ಲಿ ಸರ್ಕಾರ ಬದಲಾದ ಬಳಿಕ ನೋಟು ನಿಷೇಧ ಕುರಿತು ತನಿಖೆ ಕೈಗೊಳ್ಳುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ ಮಾತನಾಡಿ ನೋಟು ನಿಷೇಧ ಘೋಷಣೆಯಾದ ಬಳಿಕ ಹಲವು ಕಡೆಗಳಲ್ಲಿ ಅಕ್ರಮ ಹಣ ವಶ ಪಡಿಸಿಕೊಳ್ಳಲಾಲ್ಗಿದ್ದು ಅನೇಕರನ್ನು ಬಂಧಿಸಲಾಗಿತ್ತು. ಅವರೆಲ್ಲರೂ ಬಿಜೆಪಿ ಜತೆ ಸಂಪರ್ಕ ಹೊಂದಿದವರೇ ಆಗಿದ್ದರು. ಇಷ್ಟು ಮಾತ್ರವಲ್ಲ ನೋಟು ನಿಷೇಧವಾಗಿ ಹತ್ತು ದಿನಗಳಲ್ಲಿಯೇ ಜಮ್ಮು ಕಾಶ್ಮೀರದ ಭಯೋತ್ಪಾದಕರಿಗೆ ಹೊಸ ಕರೆನ್ಸಿ ನೋಟುಗಳು ಸಿಕ್ಕಿದ್ದವು ಎಂದಿದ್ದಾರೆ.
2016 ರ ನವೆಂಬರ್ 8 ರಂದು ಸರ್ಕಾರ ಹಳೆಯ 500 ಮತ್ತು 1,000 ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.ಅಲ್ಲದ 500 ಮತ್ತು 2,000 ರೂ. ಹೊಸ ನೋಟುಗಳನ್ನು ಬಿಡುಗಡೆ ಮಾಡಿತು.
ಕಪ್ಪು ಹಣ ನಿಯಂತ್ರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವ ಪ್ರಧಾನಿ ಮೋದಿಯವರ ಹೇಳಿಕೆ ಉದಾಹರಿಸಿದ ಶರ್ಮಾ ಸರ್ಕಾರದ ಈ ಉಪಕ್ರಮದ ಬಳಿಕ 99.3 ಶೇಕಡ ಹಣ ರಿಸರ್ವ್ ಬ್ಯಾಂಕಿಗೆ ಜಮೆಯಾಗಿತ್ತು. ಎಂದರೆ ಮಾರುಕಟ್ಟೆಯಲ್ಲಿನ ಅತಿ ಹೆಚ್ಚು ಪ್ರಮಾಣದ ಹಣ ಕೇಂದ್ರ ಬ್ಯಾಂಕಿಗೆ ಹಿಂದಿರುಗಿತ್ತು. ಎಂದರೆ ಅದಾವುದೂ ಕಪ್ಪು ಹಣವಾಗಿರಲಿಲ್ಲ. ಮೋದಿ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಪರೋಕ್ಷ ತೆರಿಗೆಗಳ ಕಡಿತವನ್ನು ಬೆಂಬಲಿಸುತ್ತದೆ ಆದರೆ ಬಿಜೆಪಿ ಸರಕು ಸೇವಾ ತೆರಿಗೆ ಜಾರಿಯ ವೇಳೆ ತಪ್ಪಾಗಿ ನಡೆದುಕೊಂಡಿದೆ."ಈ ವಿಷಯದಕುರುಇತು ಬಿಜೆಪಿಯಲ್ಲಿ ಗೊಂದಲವಿತ್ತು. ಜಿಎಸ್ಟಿ ವ್ಯಾಪ್ತಿಯಿಂದ ಪೆಟ್ರೋಲಿಯಂ, ವಿದ್ಯುತ್, ಮದ್ಯ ಮತ್ತು ರಿಯಲ್ ಎಸ್ಟೇಟ್ ಗಳನ್ನು ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ.
ಸಣ್ಣ, ಅತಿಸಣ್ಣ ಹಾಗೂ ಮದ್ಯಮ ಗಾತ್ರದ ಕೈಗಾರಿಕೆ, ಉದ್ಯಮ ಬೆಳವಣಿಗೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದೆ, ಈ ಮೂಲಕ 4 ಕೋಟಿ ಉದ್ಯೋಗನಷ್ಟವಾಗಿದೆ.ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ. ಈ ನಿರ್ಧಾರಗಳಿಂದ ಬಿಜೆಪಿಗೆ ಮಾತ್ರವೇ ಲಾಭವಾಗಿದೆ.ರಾಜಕೀಯ ಪಕ್ಷಗಳಿಗೆ ನೀಡಿದ ಒಟ್ಟು ದೇಣಿಗೆಗಳಲ್ಲಿ 86.4 ಶೇ. ದಷ್ಟನ್ನು ಅದೇ ಪಕ್ಷ ಸಂಗ್ರಹಿಸಿದೆ.ಕೇಸರಿ ಪಕ್ಷವು ಜಾಹೀರಾತಿಗಾಗಿಯೇ 4,297 ಕೋಟಿ ರೂ. ಖರ್ಚು ಮಾಡಿದೆ ಎಂದು ಅವರು ದೂರಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos