ದೇಶ

ಹೆರಾಯಿನ್​ಗಿಂತ ಗಸಗಸೆ ಉತ್ತಮ, ಅಫೀಮನ್ನು ಕಾನೂನುಬದ್ದಗೊಳಿಸಬೇಕು: ಸಿಧು

Raghavendra Adiga
ಅಮೃತಸರ್: ಅಫೀಮು, ಮಾದಕ ಪದಾರ್ಥಗಳನ್ನು ಕಾನೂಉಬದ್ದಗೊಳಿಸಬೇಕು.ಪಂಜಾಬ್ ನಲ್ಲಿ ಅದನ್ನು ಹಾಗೂ ಗಸಗಸೆ ಬೆಳೆಯುವುದನ್ನು ಹಾಗೂ ಮಾರಾಟವನ್ನು ಮಾನ್ಯ್ ಅಮಾಡಬೇಕು ಎಂದು ಬೇಡಿಕೆ ಸಲ್ಲಿಸಿದ್ದ ಆಮ್​ ಆದ್ಮಿ ಪಾರ್ಟಿಯ ಮಾಜಿ ಸಂಸದ ಧರ್ಮವೀರ್​ ಗಾಂಧಿ ಅವರಿಗೆ ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜ್ಯೋತ್‌ ಸಿಂಗ್‌ ಸಿಧು ಬೆಬಲ ಸೂಚಿಸಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಿಧು ಈ ಅಭಿಪ್ರಾಯ ವ್ಯಕ್ತಪಡಿಸಿದ್ದು ಅಫೀಮು ಸೇವನೆ ಮಾಡುತ್ತಿದ್ದ ನನ್ನ ಚಿಕ್ಕಪ್ಪ ಸುದೀರ್ಘಕಾಲ ಬಾಳಿದ್ದರು. ಅದು ಔಷಧಿಯಂತೆ ಅವರ ದೇಹದ ಮೇಲೆ ಕಾರ್ಯ ನಿರ್ವಹಿಸಿತ್ತು. ಹೀಗಾಗಿ ಅಫೀಮು ಬೆಳೆಯಲು ಕಾನೂನಿನಲ್ಲಿ ಅವಕಾಶ ನೀಡಬೇಕು ಎಂದಿದ್ದ ಗಾಂಧಿ ಅವರ ಮಾತಿಗೆ ನನ್ನ ಬೆಂಬಲವಿದೆ ಎಂದಿದ್ದಾರೆ.
ಪಂಜಾಬ್‌ ಸಚಿವರಾಗಿರುವ ಸಿಧು, ಆಮ್ ಆದ್ಮಿ ಪಕ್ಷದ ಪಟಿಯಾಲಾದ ಆಪ್‌ ಸಂಸದ ನಾಯಕ ಧರಮ್‌ವೀರ್‌ ಗಾಂಧಿಗೆ ಬೆಂಬಲ ಸೂಚಿಸಿ ಈ ಮಾತನ್ನು ಆಡಿದ್ದರು.
ಮುಕ್ತಸರ್​ ಮಾರುಕಟ್ಟೆಯಲ್ಲಿ ಶನಿವಾರ ನಡೆದ ರ‍್ಯಾಲಿಯಲ್ಲಿ ಧರಮ್‌ ವೀರ್‌ ಗಾಂಧಿ ಅಫೀಮು ಬೆಳೆಯುವುದನ್ನು,ಅದರ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಕಾನೂನಾತ್ಮಕ ಗೊಳಿಸಬೇಕು ಎಂದು ಆಗ್ರಹಿಸಿದ್ದರು. 
ಅದಕ್ಕೆ ಹಿಂದೆಯೂ ಅನೇಕ ಬಾರಿ ಈ ವಿಚಾರವಾಗಿ ವಾದಿಸಿದ್ದ ಗಾಂಧಿ ಹಿಂದೊಮ್ಮೆ ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವರನ್ನು ಭೇಟಿಯಾಗಿ ಈ ವಿಚಾರಕ್ಕೆ ಮನವಿ ಸಲ್ಲಿಸಿದ್ದರು.2016ರಲ್ಲಿ ಲೋಕಸಭೆಯಲ್ಲಿ ಸಹ ಅಫೀಮು ಕಾನೂನುಬದ್ದ ಮಾರಾಟ ಸಂಬಂಧ ಖಾಸಗಿ ಮಸೂದೆಯನ್ನು ಮಂಡನೆ ಮಾಡಿದ್ದರು
SCROLL FOR NEXT