ವಿದ್ಯೆ ಹೇಳಿಕೊಡಬೇಕಾದ ಪ್ರಾಂಶುಪಾಲರು ವಿದ್ಯಾರ್ಥಿಗೆ ಪೋರ್ನ್ ತೋರಿಸಿದರು!: ಮೌನವಾಗಿರಲು ಸೂಚಿಸಿದ ಸಲಹೆಗಾರತಿ! 
ದೇಶ

ವಿದ್ಯಾರ್ಥಿಗೆ ಪೋರ್ನ್ ತೋರಿಸಿದ ಪ್ರಾಂಶುಪಾಲರು: ಮೌನವಾಗಿರಲು ಸೂಚಿಸಿದ ಸಲಹೆಗಾರ್ತಿ!

ವಿದ್ಯಾರ್ಥಿಗೆ ಶಾಲೆಯ ಪ್ರಾಂಶುಪಾಲರೇ ಪೋರ್ನ್ ವಿಡಿಯೋ ತೋರಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಪುಣೆ: ವಿದ್ಯಾರ್ಥಿಗೆ ಶಾಲೆಯ ಪ್ರಾಂಶುಪಾಲರೇ  ಪೋರ್ನ್ ವಿಡಿಯೋ ತೋರಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. 
14 ವರ್ಷದ ವಿದ್ಯಾರ್ಥಿಗೆ ಪ್ರಾಂಶುಪಾಲರು ಪೋರ್ನ್ ವಿಡಿಯೋ ತೋರಿಸಿರುವುದು ತಿಳಿದಿದ್ದರೂ, ವಿದ್ಯಾರ್ಥಿಗೆ ಮೌನವಾಗಿರುವಂತೆ ಮಹಿಳಾ  ಆಪ್ತಸಲಹೆಗಾರ ಸೂಚಿಸಿರುವುದೂ ಬೆಳಕಿಗೆ ಬಂದಿದೆ. 
ಪೋರ್ನ್ ವಿಡಿಯೋ ತೋರಿಸಿದ ಪ್ರಾಂಶುಪಾಲರು ಹಾಗೂ ಘಟನೆಯ ಬಗ್ಗೆ ಅರಿವಿದ್ದರೂ ಸುಮ್ಮನೆ ಇರುವಂತೆ ಸೂಚಿಸಿದ ಮಹಿಳಾ ಆಪ್ತಸಲಹೆಗಾರರ ವಿರುದ್ಧ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 
ಅಧಿಕಾರಿಗಳ ಪ್ರಕಾರ ಮಾರ್ಚ್ ನಲ್ಲಿ ನಡೆದಿರುವ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಶಾಲೆಯಲ್ಲಿ ಪ್ರಾಂಶುಪಾಲರು ಪೋರ್ನ್ ವಿಡಿಯೋ ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿರುವುದರ ಬಗ್ಗೆ ವಿದ್ಯಾರ್ಥಿ ಶಾಲೆಯ ಆಪ್ತಸಲಹೆಗಾರರ ಬಳಿ ದೂರು ನೀಡಿದ್ದಾನೆ. 
ಪ್ರಾಂಶುಪಾಲರ ವಿರುದ್ಧ ಮಾತನಾಡಿದರೆ ತನ್ನ ಕೆಲಸಕ್ಕೆ ಕುತ್ತು ಬರಲಿದೆ ಎಂಬ ಭಯದಿಂದಾಗಿ ಆಪ್ತ ಸಲಹೆಗಾರರು ವಿದ್ಯಾರ್ಥಿಗೆ ಈ ವಿಷಯದ ಬಗ್ಗೆ ಮೌನವಾಗಿರುವಂತೆ ಸೂಚಿಸಿದ್ದಾರೆ.  ಈ ನಡುವೆ ವಿದ್ಯಾರ್ಥಿಯ ಶಿಕ್ಷಣಕ್ಕೆ ಕುತ್ತುಬರಬಹುದೆಂಬ ಭಯದಿಂದಾಗಿ ಪೋಷಕರೂ ಸಹ ಮೌನವಾಗಿದ್ದರು. ಆದರೆ ಪೊಲೀಸರಿಗೆ ಈ ಘಟನೆ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಶಾಲೆಯನ್ನು ಸಂಪರ್ಕಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ‘ಧುರಂಧರ್’ ನಟಿ? ಡೈಮಂಡ್ ರಿಂಗ್ ಪ್ರದರ್ಶಿಸಿದ ಆಯೇಷಾ; ಫೋಟೋ ವೈರಲ್

ಬಾಗಲಕೋಟೆ ಬಳಿ ಭೀಕರ ಅಪಘಾತ: ಬೈಕ್‌ಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ; ಸ್ಥಳದಲ್ಲೇ ಇಬ್ಬರು ಸಾವು

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್