ತೆಲಂಗಾಣ: ಪರೀಕ್ಷೆ ಬರೆಯಲು ಹೋದ ತಾಯಿ, ಮಗುವಿನ ಲಾಲನೆ ಪೊಲೀಸ್ ಪೇದೆ, ಫೋಟೋ ವೈರಲ್!
ಪರೀಕ್ಷೆ ಬರೆಯಲು ತಾಯಿ ಹೋದಾಗ ಭದ್ರತೆಗೆ ನಿಯೋಜನೆಯಾಗಿದ್ದ ಪೊಲೀಸ್ ಪೇದೆಯೋರ್ವ ಆಕೆಯ 6 ತಿಂಗಳ ಮಗುವನ್ನು ಲಾಲನೆ ಮಾಡಿ ಇದೀಗ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಹೈದರಾಬಾದ್: ಪರೀಕ್ಷೆ ಬರೆಯಲು ತಾಯಿ ಹೋದಾಗ ಭದ್ರತೆಗೆ ನಿಯೋಜನೆಯಾಗಿದ್ದ ಪೊಲೀಸ್ ಪೇದೆಯೋರ್ವ ಆಕೆಯ 6 ತಿಂಗಳ ಮಗುವನ್ನು ಲಾಲನೆ ಮಾಡಿ ಇದೀಗ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ತೆಲಂಗಾಣದ ಮೂಸಾಪೇಟ್ ನ ಪೊಲೀಸ್ ಪೇದೆ ಮುಜಿಬ್ ಉರ್ ರಹಮಾನ್ ಪರೀಕ್ಷೆ ಬರೆಯಲು ಬಂದಿದ್ದ ತಾಯಿಯ ಕಂದಮ್ಮನಿಗೆ ಅಮ್ಮನಾಗಿ ಸಾಂತ್ವನ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಹೀರೋ ಆಗಿದ್ದಾರೆ.
ನಾಲ್ಕು ತಿಂಗಳ ಮಗುವಿನ ತಾಯಿ ಪರೀಕ್ಷೆ ಬರೆಯಲು ಬಂದಿರುತ್ತಾರೆ. ಆ ತಾಯಿಗೆ ತೆಲಂಗಾಣ ಪೊಲೀಸ್ ಪೇದೆ ಮಗುವನ್ನು ನೋಡಿಕೊಳ್ಳುವ ಮೂಲಕ ಸಹಾಯ ಮಾಡಿದ್ದಾರೆ. ಪರೀಕ್ಷೆ ಕೇಂದ್ರದ ಹೊರಗೆ ಅಳುತ್ತಿದ್ದ ಮಗುವಿಗೆ ಸಾಂತ್ವನ ಮಾಡಲು ಯತ್ನಿಸುತ್ತಿದ್ದ ಛಾಯಾಚಿತ್ರವನ್ನು ಸಹೋದ್ಯೋಗಿಯೊಬ್ಬರು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ ಪೇದೆ ಕಾರ್ಯಕ್ಕೆ ಐಪಿಎಸ್ ಅಧಿಕಾರಿ ರೆಮಾ ರಾಜೇಶ್ವರಿ ಪೊಲೀಸ್ ಪೇದೆಗೆ ಹೃತ್ಪೂರ್ವಕ ವಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ. ಇದೀಗ ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಪೊಲೀಸ್ ಪೇದೆ ಮುಜಿಬ್ ಉರ್ ರಹಮಾನ್ ಅವರು ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಮೂಸಾಪೇಟ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತಿದ್ದು, ರಹಮಾನ್ ಅವರನ್ನು ಬಾಬುಸ್ ಜೂನಿಯರ್ ಕಾಲೇಜಿನಲ್ಲಿ ನಡೆಯುವ ಪರೀಕ್ಷಾ ಕೇಂದ್ರಕ್ಕೆ ಭದ್ರತಾ ವ್ಯವಸ್ಥೆಗಾಗಿ ನಿಯೋಜಿಸಲಾಗಿತ್ತು.
ಮಗುವಿನ ತಾಯಿ ಸ್ನಾತಕೋತ್ತರ ಪದವೀಧರೆಯಾಗಿದ್ದು, ಯೋಗ್ಯ ಕೆಲಸವಿರಲಿಲ್ಲ. ಅಷ್ಟೇ ಅಲ್ಲದೇ ಮಗುವಿನ ತಾಯಿ ಪೊಲೀಸ್ ಪೇದೆಯಾಗುವ ಆಸೆಯನ್ನು ಹೊಂದಿದ್ದಳು. ಹೀಗಾಗಿ ತಾಯಿ ಪರೀಕ್ಷೆ ಬರೆಯಲು ಬಂದಿದ್ದು, ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದರು. 14 ವರ್ಷದ ಹುಡುಗಿಯನ್ನು ಪರೀಕ್ಷಾ ಕೇಂದ್ರದಲ್ಲಿ ಉಸ್ತುವಾರಿಯಾಗಿ ಮಾಡಲಾಗಿತ್ತು. ಈ ವೇಳೆ ಮಗು ಅಳುತ್ತಿದ್ದದ್ದನ್ನು ಕಂಡು ಕರೆದುಕೊಂಡು ಬಂದು ನಾನು ಸಾಂತ್ವನ ಮಾಡಿದೆ ಎಂದು ರಹಮಾನ್ ಹೇಳಿದರು.
ರಹಮಾನ್ ಅವರಿಗೆ ಇಬ್ಬರು ಮಕ್ಕಳಿದ್ದು, ಮಗ ಚೀನಾದಲ್ಲಿ ಮೆಡಿಕಲ್ ಓದುತ್ತಿದ್ದಾನೆ. ಮಗಳು ಮುಂದಿನ ವರ್ಷ ಶಾಲೆಯನ್ನು ಮುಗಿಸುತ್ತಿದ್ದಾರೆ.
We @MBNRpolice are very proud of Head Constable Officer Mujeeb-ur-Rehman.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.