3 ನೆ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ: 15 ವರ್ಷದ ಬಾಲಕನ ಬಂಧನ
ನವದೆಹಲಿ: ಅಘಾತಕಾರಿ ಬೆಳವಣಿಗೆಯೊಂದರಲ್ಲಿ 3 ನೇ ತರಗತಿ ವಿದ್ಯಾರ್ಥಿನಿಯ ಮೇಲೆ 15 ವರ್ಷದ ಬಾಲಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ನವದೆಹಲಿಯ ಸ್ವರೂಪ್ ನಗರದಲ್ಲಿ ಅ.1 ರಂದು ನಡೆದಿರುವ ಈ ಘಟನೆಯ ಬಗ್ಗೆ ಉಪ ಆಯುಕ್ತ ಅಸ್ಲಾಮ್ ಖಾನ್ ಮಾಹಿತಿ ನೀಡಿದ್ದು, ಅತ್ಯಾಚಾರಕ್ಕೆ ಯತ್ನಿಸಿದ ಬಾಲಕನನ್ನು ಬಂಧಿಸಲಾಗಿದ್ದು, ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದು ಇಂತಹದ್ದೇ ಲೈಂಗಿಕ ಕಿರುಕುಳ ಪ್ರಕರಣವೂ ನವದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಸೋದರ ಸೊಸೆಯ ಮೇಲೆ ಸೋದರ ಮಾವ ಕಳೆದ 4 ವರ್ಷಗಳಿಂದ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಜಾತಕದಲ್ಲಿರುವ ದೋಷವನ್ನು ಬಗೆಹರಿಸುವುದಾಗಿ ಹೇಳಿ ನಂಬಿಸಿ ಸೋದರ ಸೊಸೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಜಾತಕದಲ್ಲಿರುವ ದೋಷವನ್ನು ನಿವಾರಣೆ ಮಾಡದೇ ಇದ್ದರೆ ಆಕೆಯ ತಂದೆ ಸಾವನ್ನಪ್ಪುತ್ತಾರೆ ಎಂದು ಭಯ ಹುಟ್ಟಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಇದೇ ರೀತಿ 4 ವರ್ಷಗಳ ಕಾಲ ಅತ್ಯಾಚಾರವೆಸಗಿದ್ದು, ಆಕೆಗೆ ವಿವಾಹವಾದ ಬಳಿಕವೂ ಇದನ್ನೇ ಮುಂದುವರೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos