ದೇಶ

ಗುಂಡೇಟಿನಿಂದಲೇ ಆ್ಯಪಲ್ ಸಿಬ್ಬಂದಿ ವಿವೇಕ್ ಸಾವು: ಮರಣೋತ್ತರ ಪರೀಕ್ಷೆ ವರದಿ

Shilpa D
ಲಕ್ನೋ:  ಆ್ಯಪಲ್‌ ಕಂಪೆನಿಯ ಎಕ್ಸಿಕ್ಯುಟಿವ್‌ ವಿವೇಕ್‌ ತಿವಾರಿ ಮರಣೋತ್ತರ ವರದಿ ಬಂದಿದ್ದು ತಿವಾರಿ ಅವರ ಎಡ ಗದ್ದಕ್ಕೆ ತಗುಲಿರುವ ಗುಂಡೇಟಿನಿಂದಲೇ ಅವರ ಸಾವು ಸಂಭವಿಸಿರುವುದು ದೃಢಪಟ್ಟಿದೆ. 
ವಿವೇಕ್‌ ತಿವಾರಿ ಅವರ ಮರಣೋತ್ತರ ವರದಿಯಿಂದ ಇನ್ನೊಂದು ಸಂಗತಿಯೂ ಸಾಬೀತಾಗಿದೆ. ಅದೆಂದರೆ ಆತ್ಮರಕ್ಷಣೆಗಾಗಿ ಪೊಲೀಸರು ಆತನಿಗೆ ಗುಂಡು ಹೊಡೆದರೆಂಬ ವಾದವು ಸುಳ್ಳೆಂದು ಗೊತ್ತಾಗಿದೆ. 
ತಿವಾರಿ ಸಾವು ಆಕಸ್ಮಿಕ ಅವಘಡದಿಂದ ಆದುದಲ್ಲ, ಬದಲು ಗುಂಡೇಟಿನಿಂದ ಆಗಿರುವ ಮಾರಣಾಂತಿಕ ಗಾಯದಿಂದಲೇ ಸಂಭವಿಸಿದೆ ಎಂಬುದು ಅಟಾಪ್ಸಿ ವರದಿಯಿಂದ ದೃಢ ಪಟ್ಟಿರುವುದಾಗಿ ಮೂಲಗಳು ತಿಳಿಸಿವೆ. 
ತಿವಾರಿಗೆ ಗುಂಡು ಹೊಡೆದ ಪ್ರಕರಣದಲ್ಲಿ , "ನನ್ನದೇನೂ ತಪ್ಪಿಲ್ಲ, ನಾನು ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿದೆ, ಏಕೆಂದರೆ ಆತ ಮೂರು ಬಾರಿ  ತನ್ನ ಕಾರನ್ನು ನಮ್ಮ ಮೇಲೆ ಹರಿಸಲು ಯತ್ನಿಸಿದ ಎಂದು ಹೇಳಿದ್ದರು. ಗೋಮತಿನಗರ ಪೊಲೀಸ್ ಠಾಣೆಯ ಪ್ರಶಾಂತ್ ಚೌಧುರಿ ಹೇಳಿದ್ದಾರೆ
ಉತ್ತರ ಪ್ರದೇಶ ಪೊಲೀಸರು ಘಟನೆಯ ಬಗ್ಗೆ ವಿಶೇಷ ತನಿಖಾ ತಂಡವನ್ನು ರೂಪಿಸಿದ್ದಾರೆ. ಪೊಲೀಸ್‌ ಸುಪರಿಂಟೆಂಡೆಂಟ್‌ ಓರ್ವರು ಈ ತಂಡದ ನೇತೃತ್ವ ವಹಿಸಿದ್ದರು. 
SCROLL FOR NEXT