ನವದೆಹಲಿ: ಬಿಜೆಪಿ ಸರ್ಕಾರಕ್ಕೂ ಬ್ರಿಟಿಷ್ ಆಡಳಿತಕ್ಕೂ ಒಂದೇ ರೀತಿಯ ಹೋಲಿಕೆ ಇದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ದಾರಿಯಲ್ಲಿ ನಡೆಯಬೇಕು ಎಂದು ಸಲಹೆ ನೀಡಿದ್ದಾರೆ.
ವಾರ್ದಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಂತರ ಮಾತನಾಡಿದ ಸುರ್ಜೇವಾಲಾ ದೇಶದಲ್ಲಿ ಸುಳ್ಳು, ಲೂಟಿ, ಮುಕ್ತಿ ಕಾ ಸಂಗ್ರಾಮ್ ನಡೆಯುತ್ತಿದೆ, ಸೇವಾಗ್ರಾಮದಲ್ಲಿ 76 ವರ್ಷಗಳ ನಂತರ ಕಾಂಗ್ರೆಸ್ ಸಭೆ ನಡೆಸುತ್ತಿದೆ ಎಂದರು.
ಬಿಜೆಪಿ ಸರ್ಕಾರ ಬ್ರಿಟಿಷ್ ರಾಜ್ ನಂತಿದೆ, ಆರ್ ಎಸ್ ಎಸ್ ಬ್ರಿಟಿಷರಿಗೆ ಗುಲಾಮರಾಗಿತ್ತು, ಹಿಂಸೆ, ಧ್ವೇಷ ಮತ್ತು ವಿಭಜನೆ ಆರ್ ಎಸ್ ಎಸ್ ನ ಮೂಲ ಮಂತ್ರ, ಆದರೆ ಹಿರಿಯರಾದ ಮೋಹನ್ ಭಾಗವತ್ ಅವರಿಗೆ ಕಾಂಗ್ರೆಸ್ ಗೌರವ ನೀಡುತ್ತದೆ, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಕೊಡುಗೆ ಬಹಳವಿದೆ, ಇದನ್ನು ಪ್ರತಿಯೊಬ್ಬರು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.