ಅಗರ್ತಲಾ: ತ್ರಿಪುರಾದ ಪಂಚಾಯತ್ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಜಯಭೇರಿ ಭಾರಿಸಿದೆ.
113 ಗ್ರಾಮಪಂಚಾಯತ್ ಸ್ಥಾನಗಳನ್ನು ಗಳಿಸುವ ಮೂಲಕ ಬಿಜೆಪಿ ತ್ರಿಪುರಾದಲ್ಲಿ ಮತ್ತಷ್ಟು ಭದ್ರ ನೆಲೆ ಕಂಡುಕೊಂಡಿದೆ. ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್ ಟಿ) ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಪರಿಣಾಮವಾಗಿ ಐಪಿಎಫ್ ಟಿ 9 ಗ್ರಾಮಪಂಚಾಯತಿ ಸ್ಥಾನಗಳನ್ನು ಪಡೆದಿದೆ.
ಇದೇ ವೇಳೆ ಬಿಜೆಪಿ 5 ಪಂಚಾಯತ್ ಸಮಿತಿ ಸ್ಥಾನಗಳನ್ನೂ ಗೆದ್ದಿದ್ದು ಸಿಪಿಐಎಂ ಕೇವಲ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿವೆ, 3,386 ಸ್ಥಾನಗಳಿಗೆ ಉಪಚುನಾವಣೆ ನಡೆದಿದ್ದು 3,207 ಗ್ರಾಮಪಂಚಾಯತ್ ಸ್ಥಾನಗಳು, 161 ಪಂಚಾಯತ್ ಸಮಿತಿ, 18 ಜಿಲ್ಲಾ ಪರಿಷತ್ ಸ್ಥಾನಗಳಿಗೆ ಸೆ.30 ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಕೇವಲ 130 ಗ್ರಾಮಪಂಚಾಯಿತಿ, 7 ಪಂಚಾಯತ್ ಸಮಿತಿಗಳನ್ನು ಹೊರತುಪಡಿಸಿ ಶೇ.96 ರಷ್ಟು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದರು.