ದೇಶ

ಮೋದಿ ಸರ್ಕಾರದ ದಿಟ್ಟ ನಿರ್ಧಾರ, ಅಕ್ರಮವಾಗಿ ನೆಲೆಸಿದ್ದ ರೋಹಿಂಗ್ಯಾಗಳ ಗಡಿಪಾರಿಗೆ ಭಾರತದ ಮೊದಲ ಹೆಜ್ಜೆ!

Vishwanath S
ಗುವಾಹಟಿ: ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ರೋಹಿಂಗ್ಯಾಗಳನ್ನು ಗಡೀಪಾರು ಮಾಡಲು ಭಾರತ ಮೊದಲ ಹೆಜ್ಜೆಯಿಟ್ಟಿದ್ದು ಏಳು ಮಂದಿ ರೋಹಿಂಗ್ಯಾಗಳನ್ನು ಮ್ಯಾನ್ಮಾರ್ ಗೆ ಮರಳಿ ಕಳುಹಿಸಲು ಗೃಹ ಸಚಿಲವಾಯ ಸಿದ್ಧತೆ ನಡೆಸಿದೆ. 
ಮ್ಯಾನ್ಮಾರ್ ನಲ್ಲಿ ದಾಂಧಲೆಯೆಬ್ಬಿಸಿ ರೋಹಿಂಗ್ಯಾ ಮುಸ್ಲಿಂರು ಭಾರತದಲ್ಲಿ ಬಂದು ಅಕ್ರವಾಗಿ ನೆಲೆಸಿದ್ದಾರೆ. 2012ರಲ್ಲಿ ಭಾರತದೊಳಗೆ ಅಕ್ರಮವಾಗಿ ಬರಲು ಯತ್ನಿಸಿದ ರೋಹಿಂಗ್ಯಾಗಳನ್ನು ಬಂಧಿಸಿದ್ದು ಅವರನ್ನು ನಾಳೆ ಮ್ಯಾನ್ಮಾರ್ ಗಡಿ ರಕ್ಷಕರಿಗೆ ಒಪ್ಪಿಸುವ ಸಾಧ್ಯತೆ ಇದೆ. 
ಇನ್ನು ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ರೋಹಿಂಗ್ಯಗಳನ್ನು ಗುರುತಿಸಿ ಅವರನ್ನು ಗಡೀಪಾರು ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಸಚಿಲವಾಯ ಸೂಚನೆ ನೀಡಿದೆ. 
ಅಸ್ಸಾಂ ಜೈಲಿನಲ್ಲಿದ್ದ ಈ ಏಳು ರೋಹಿಂಗ್ಯಗಳನ್ನು ಮರಳಿ ಕಳುಹಿಸಲು ಅಗತ್ಯವಿರುವ ಅನುಮತಿಯನ್ನು ಮ್ಯಾನ್ಮಾರ್ ನಿಂದ ಪಡೆದಿದ್ದು ಅವರನ್ನು ಮಣಿಪುರದಲ್ಲಿರುವ ಮೊರೆ ಗಡಿಯತ್ತ ಕೊಂಡೊಯ್ಯಲಾಗುತ್ತಿದೆ.
SCROLL FOR NEXT