ದೇಶ

‘ಚಾಂಪಿಯನ್ಸ್ ಆಫ್ ದಿ ಅರ್ಥ್‌’ ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಮೋದಿ

Lingaraj Badiger
ನವದೆಹಲಿ: ಪರಿಸರ ಸಂರಕ್ಷಣೆಗೆ ಸಂಬಂಧಿಸದಂತೆ ವಿಶ್ವಸಂಸ್ಥೆ ನೀಡುವ ಅತ್ಯುನ್ನತ ಪುರಸ್ಕಾರ ‘ಚಾಂಪಿಯನ್ಸ್ ಆಫ್ ದಿ ಅರ್ಥ್‌’ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಅವರು ಬುಧವಾರ ಸ್ವೀಕರಿಸಿದರು.
ಇಂದು ದೆಹಲಿಯ ಪ್ರವಾಸಿ ಭಾರತೀಯ ಕೇಂದ್ರದ ನಡೆದ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟರ್ರೆಸ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿ ಪ್ರಧಾನಿ, ಪರಿಸರ ಸಂರಕ್ಷಣೆಗೆ ಭಾರತೀಯರು ಬದ್ಧರಾಗಿದ್ದು, ಸ್ವಚ್ಛ ಮತ್ತು ಹಸಿರು ಪರಿಸರ ನಿರ್ಮಾಣ ನಮ್ಮ ಸರ್ಕಾರದ ಉದ್ದೇಶ ಎಂದರು.
ಆದಿವಾಸಿಗಳು ಜೀವಕ್ಕಿಂತ ಹೆಚ್ಚಾಗಿ ಅರಣ್ಯ ಪ್ರದೇಶವನ್ನು ಪ್ರೀತಿಸುತ್ತಾರೆ. ಮಣ್ಣನ್ನು ರೈತರು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಾರೆ.  ಪ್ರಕೃತಿ ವಿಕೋಪ ತಡೆಗೆ ಪರಿಸರ ಸಂರಕ್ಷಣೆ ಅವಶ್ಯ. ಪರಿಸರ ಸಂರಕ್ಷಕರಿಗೆ ನಾನು ಆಭಾರಿಯಾಗಿದ್ದೇನೆ ಎಂದರು.
2022ರೊಳಗೆ ಪ್ಲಾಸ್ಟಿಕ್ ಮುಕ್ತ ಭಾರತದ ಗುರಿ ಹೊಂದಲಾಗಿದೆ. ನನ್ನ ಕೆಲಸವನ್ನು ದೇವರ ಕೆಲಸ ಎಂದುಕೊಂಡಿದ್ದೇನೆ ಎಂದು ಪ್ರಧಾನಿ ತಿಳಿಸಿದರು.
ವಿಶ್ವಸಂಸ್ಥೆಯ ಈ ಪ್ರಶಸ್ತಿ ಭಾರತಕ್ಕೆ ಸಂದ ಗೌರವವಾಗಿದೆ. ಭಾರತದ ಸಂಸ್ಕೃತಿ ಭೂಮಿಯೊಂದಿಗೆ ಸಮ್ಮಿಳಿತವಾಗಿದೆ. ಈ ಪ್ರಶಸ್ತಿ ದೇಶದ ಕೋಟ್ಯಂತರ ರೈತರಿಗೆ ಸಂದ ಗೌರವವಾಗಿದೆ. ಇದು ಅರಣ್ಯ ಸಂರಕ್ಷಕರಿಗೂ ಸಂದ ಸನ್ಮಾನ. ನಿಮ್ಮ ತಾಯಿಯಂತಿರುವ ಭೂಮಿ ಅಪಾಯದಲ್ಲಿದೆ. ಎಲ್​ಪಿಜಿ ಸಂಪರ್ಕದ ಮೂಲಕ ಪರಿಸರ ರಕ್ಷಣೆಗೆ ಮುಂದಾಗಿದ್ದೇವೆ. ಉಜ್ವಲ ಯೋಜನೆ ಮೂಲಕ ಎಲ್​​ಪಿಜಿ ಸಂಪರ್ಕ ನೀಡಲಾಗುತ್ತಿದೆ ಎಂದು ಹೇಳಿದರು.
SCROLL FOR NEXT