ದೇಶ

ಮೀಸಲಾತಿ ವ್ಯವಸ್ಥೆ ಬದಲಾವಣೆಯ ಹಕ್ಕು ಯಾರಿಗೂ ಇಲ್ಲ: ನಿತೀಶ್ ಕುಮಾರ್

Shilpa D
ಪಾಟ್ನಾ: 2019ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ವೇಳೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ಮುಂದಾಗಿವೆ, ಮೀಸಲಾತಿಯಲ್ಲಿ ಬದಾಲವಣೆ ತರುವ ಹಕ್ಕು ಯಾರಿಗೂ ಇಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಪಾಟ್ನಾದಲ್ಲಿ ಆಯೋಜಿಸಿದ್ದ ದಲಿತ-ಮಹಾದಲಿತ ಸಮ್ಮೇಳನದಲ್ಲಿ ಮಾತನಾಡಿದ ನಿತೀಶ್ ಕುಮಾರ್, ದೇಶದಲ್ಲಿರುವ ಮೀಸಲಾತಿ ವ್ಯವಸ್ಥೆಯನ್ನು ಬದಲಾಯಿಸುವ ಹತ್ತಿಲ್ಲ ಎಂದು ಹೇಳಿದ್ದಾರೆ.
ಭಾರತ ದೇಶ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಅಳವಡಿಸಿಕೊಂಡಿದೆ. ಪರಿಶಿಷ್ಟ  ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರ ಹಕ್ಕುಗಳ ಬಗ್ಗೆ ಯಾರು ಮಾತನಾಡಬಾರದು ಎಂದು ಹೇಳಿದ್ದಾರೆ,
ಸಾಮಾಜಿಕ ಮಾದ್ಯಮಗಳ ಈ ಯುಗದಲ್ಲಿ ಕೇವಲ ವೈರಲ್‌ ಆಗಬೇಕೆಂಬ ಉದ್ದೇಶದಿಂದ ಜನರು ಅನಗತ್ಯ ಮತ್ತು ಅನಪೇಕ್ಷಿತ  ಮಾತುಗಳನ್ನು ಆಡುವ ಅಭ್ಯಾಸವನ್ನು ಹೊಂದಿದ್ದಾರೆ ಎಂದು ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು "ಮೀಸಲಾತಿ' ಕುರಿತಂತೆ ನೀಡಿರುವ ಪ್ರತಿಕ್ರಿಯೆಗೆ ಉತ್ತರವೆಂಬಂತೆ ನಿತೀಶ್‌ ಅವರು, "ಅನಗತ್ಯವಾಗಿ ಅಸಂಬದ್ಧ ಮಾತುಗಳನ್ನು ಅಭ್ಯಾಸ ಮಾಡಿಕೊಂಡಿರುವವರು ಅದನ್ನು ಮುಂದುವರಿಸುತ್ತಾರೆ ಮತ್ತು ಅದು ಅವರ ಮಟ್ಟಿಗೆ ಸಹಜವೇ ಆಗಿರುತ್ತದೆ' ಎಂದು ಹೇಳಿದರು.
SCROLL FOR NEXT