ನವದೆಹಲಿ: ಪತ್ನಿ ಕೊಲೆ ಪ್ರಕರಣದಲ್ಲಿ ಮಾಜಿ ಟಿವಿ ನಿರೂಪಕ ಹಾಗೂ ನಿರ್ಮಾಪಕ ಸುಹೇಬ್ ಇಲ್ಯಾಸಿ ಅವರನ್ನು ದೆಹಲಿ ಹೈಕೋರ್ಟ್ ಖುಲಾಸೆಗೊಳಿಸಿದೆ.
ನ್ಯಾಯಮೂರ್ತಿ ಎಸ್ ಮುರುಳೀಧರ್ ಮತ್ತು ವಿನೋದ್ ಗೋಯೆಲ್ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ. ತನ್ನ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ವಿಚಾರಣಾಧೀನ ನ್ಯಾಯಾಲಯ ಕಳೆದ ವರ್ಷದ ಡಿಸೆಂಬರ್ 20 ರಂದು ಪತ್ನಿ ಅಂಜು ಇಲ್ಯಾಸಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಹೇಬ್ ಇಲ್ಯಾಸಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು, ಅದನ್ನು ಪ್ರಶ್ನಿಸಿ ಸುಹೇಬ್ ಮಾರ್ಚ್ 2018ರಂದು ಮೇಲ್ಮನವಿ ಸಲ್ಲಿಸಿದರು.
ಇಂಡಿಯಾ ಮೋಸ್ಟ್ ವಾಂಟೆಡ್ ಎಂಬ ಕಾರ್ಯಕ್ರಮದ ಮೂಲಕ ಸುಹೇಬ್ ಇಲ್ಯಾಸಿ ಪ್ರಸಿದ್ದರಾದರು, 2000ನೇ ಇಸವಿಯಲ್ಲಿ ತನ್ನ ಪತ್ನಿಯನ್ನು ಇರಿದು ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸಿದ್ದರು.