ನವದೆಹಲಿ: ರಾಜಕೀಯ ಸಿದ್ಧಾಂತ ಯಾವುದೇ ಇರಲಿ ಸಂವಿಧಾನದ ವಿರುದ್ಧ ಕೆಲಸ ಮಾಡುತ್ತಿರುವವರನ್ನು ಹತ್ತಿಕ್ಕುತ್ತೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಸಂವಿಧಾನದ ವಿರುದ್ಧ ಯಾರೇ ಕೆಲಸ ಮಾಡಿದರೂ ಯಾವ ಸಿದ್ಧಾಂತ ಯಾವ ರಾಜಕೀಯ ಪಕ್ಷಕ್ಕೆ ಸೇರಿದವರು ಎಂಬುದನ್ನೂ ಲೆಕ್ಕಿಸದೇ ನಾನು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ, ಇದು ನನ್ನ ರಾಜಧರ್ಮ ನಾನು ಅದನ್ನೇ ಪಾಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಹಿಂದೂಸ್ಥಾನ್ ಟೈಮ್ಸ್ ಲೀಡಾರ್ಶಿಪ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ದೇವೇಂದ್ರ ಫಡ್ನವೀಸ್, ನಾನು ಬಲಪಂಥೀಯ, ಎಡಪಂಥೀಯ ತೀವ್ರ ಸೈದ್ಧಾಂತಿಕವಾದಿಗಳನ್ನು, ಧಾರ್ಮಿಕತೆಯನ್ನು ಪರಿಗಣಿಸುವುದಿಲ್ಲ, ಸಂವಿಧಾನದ ವಿರುದ್ಧ ಯಾರೇ ಕೆಲಸ ಮಾಡಿದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಂಡೇ ಸಿದ್ಧ ಎಂದು ಹೇಳಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರದ ಭೀಮಾ ಕೊರೆಗಾಂವ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ 5 ಕಾರ್ಯಕರ್ತರ ಬಗ್ಗೆಯೂ ಮಾತನಾಡಿರುವ ಫಡ್ನವೀಸ್, 5 ಕಾರ್ಯಕರ್ತರ ಬಂಧನ ರಾಜಕೀಯ ಪ್ರೇರಿತವಲ್ಲ ಎಂದು ಹೇಳಿದ್ದಾರೆ.
ಅದು ರಾಜಕೀಯ ದ್ವೇಷವೇ ಆಗಿದ್ದರೆ ಸುಪ್ರೀಂ ಕೋರ್ಟ್ ನಕಲಿ ಉದಾರವಾದಿಗಳು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ. ಯುದ್ಧ ಸನ್ನಿವೇಶ ಸೃಷ್ಟಿಸಲು ಎರಡು ಸಮುದಾಯಗಳ ನಡುವೆ ಗಲಭೆ ಉಂಟುಮಾಡುವ ಪ್ರಯತ್ನ ಭೀಮಾ ಕೊರೆಗಾಂವ್ ನ ಘಟನೆಯದ್ದಾಗಿತ್ತು ಎಂದು ಫಡ್ನವೀಸ್ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics