ದೇಶ

ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ದೂರಿಗೆ ವಯಸ್ಸಿನ ಮಿತಿ ನಿಗದಿಗೊಳಿಸಿದಂತೆ ಕಾನೂನು ಸಚಿವಾಲಯ ಕೇಳಿದ ಮನೇಕಾ

Nagaraja AB

ನವ ದೆಹಲಿ: ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ವಿರುದ್ಧ ದೂರು ಸಲ್ಲಿಸಲು ಯಾವುದೇ ವಯಸ್ಸಿನ ಮಿತಿಯನ್ನು ನಿಗದಿಗೊಳಿಸದಂತೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಮೇನಕಾ ಗಾಂಧಿ ಕಾನೂನು ಸಚಿವಾಲಯವನ್ನು ಕೇಳಿಕೊಂಡಿದ್ದಾರೆ.

ಮಹಿಳೆಯರ ವಿರುದ್ಧದ ಲೈಂಗಿಕ ಕಿರುಕುಳ ಸಂಬಂಧ ದೂರು ನೀಡಲು ಮೀ ಟೂ ಅಭಿಯಾನ ಆರಂಭವಾಗಿರುವುದಕ್ಕೆ  ಮನೇಕಾ ಗಾಂಧಿ ಸಂತಸ ವ್ಯಕ್ತಪಡಿಸಿದ್ದಾರೆ.  ಲೈಂಗಿಕ ಕಿರುಕುಳ ನೀಡಿದ್ದವರ ವಿರುದ್ಧ ದೂರು ಸಲ್ಲಿಸಲು ಮಹಿಳೆಯರು ಮುಂದೆ ಬರಬೇಕು ಎಂದು ಅವರು ಪ್ರೋತ್ಸಾಹ ನೀಡಿದ್ದಾರೆ.

ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ವಿರುದ್ಧ ದೂರು ಸಲ್ಲಿಸಲು ಯಾವುದೇ ವಯಸ್ಸಿನ ಮಿತಿ ನಿಗದಿಗೊಳಿಸಿದಂತೆ  ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿರುವುದಾಗಿ  ಮನೇಕಾ ಗಾಂಧಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಿಆರ್ ಪಿಸಿ ಸೆಕ್ಷನ್ 468 ಪ್ರಕಾರ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಸೇರಿದಂತೆ ಯಾವುದೇ ಅಪರಾಧಕ್ಕೆ ದೂರು ದಾಖಲಾದಮೂರು ವರ್ಷದೊಳಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ.
ಸಿಆರ್ ಪಿಸಿ ಸೆಕ್ಷನ್ 473 ರ ಪ್ರಕಾರ,  ಒಂದು ವೇಳೆ ನ್ಯಾಯದ ಹಿತಾರಕ್ಷಣೆಗೆ ಸಂಬಂಧಿಸಿದ್ದಾಗಿದ್ದರೆ,  ನ್ಯಾಯಾಲಯ ಹಳೆಯ ಪ್ರಕರಣದ  ಬಗ್ಗೆ ಗಮನ ಹರಿಸಬಹುದಾಗಿದೆ ಅಥವಾ ಸೂಕ್ತ ವಿವರಣೆಗಾಗಿ ಪ್ರಕರಣದ ವಿಚಾರಣೆಯನ್ನು ವಿಳಂಬ ಮಾಡಬಹುದಾಗಿದೆ.
SCROLL FOR NEXT