ದೇಶ

ಅಮ್ರಪಾಲಿ ಗ್ರೂಪ್ ನ ಮೂವರು ನಿರ್ದೇಶಕರನ್ನು ಪೊಲೀಸ್ ವಶಕ್ಕೆ ನೀಡಿದ ಸುಪ್ರೀಂ ಕೋರ್ಟ್!

Nagaraja AB

ನವದೆಹಲಿ: ಅಮ್ರಪಾಲಿ ಸಮೂಹದ ಮೂವರು ನಿರ್ದೇಶಕರನ್ನು ಪೊಲೀಸ್ ವಶಕ್ಕೆ ಸುಪ್ರೀಂ ಕೋರ್ಟ್ ಇಂದು ಒಪ್ಪಿಸಿದೆ.  

ಅಮ್ರಪಾಲಿ ಸಮೂಹಕ್ಕೆ ಸೇರಿರುವ  46 ಕಂಪನಿಗಳ ದಾಖಲಾತಿಗಳನ್ನು ಫೋರೆನ್ಸಿಕ್ ಅಡಿಟರ್ಸ್ ಗೆ ನೀಡುವಂತೆ ನಿರ್ದೇಶಿಸಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಅರುಣ್ ಮಿಶ್ರಾ ಹಾಗೂ ಯು ಯು ಲಲಿತ್ ಅವರಿದ್ದ ಪೀಠ, ಈ ಹಿಂದೆ ನೀಡಿದ್ದ ಆದೇಶವನ್ನು ನಿರ್ದೇಶಕರು  ಉಲ್ಲಂಘಿಸಿದ್ದಾರೆ ಎಂದು ಹೇಳಿಕೆ ನೀಡಿತ್ತು.

ನಿರ್ದೇಶಕರು ಮಾಹಿತಿಯನ್ನು ಬಚ್ಚಿಡುವ ನಾಟಕವಾಡುತ್ತಿದ್ದಾರೆ. ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಲು ಪ್ರಯತ್ನಿಸುತ್ತಿದ್ದೀರಿ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿತು.

ಅಮ್ರಪಾಲಿ ಸಮೂಹದ ಎಲ್ಲಾ ದಾಖಲಾತಿಗಳನ್ನು ವಶಪಡಿಸಿಕೊಂಡು, ಫೋರೆನ್ಸಿಕ್ ಅಡಿಟರ್ಸ್ ಗೆ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ಈ ಸಮೂಹದ ಯಾವುದೇ ದಾಖಲೆಗಳನ್ನು ಬಿಡದಂತೆ ವಶಕ್ಕೆ ತೆಗೆದುಕೊಳ್ಳುವಂತೆ ಪೊಲೀಸರಿಗೆ ತಿಳಿಸಿತು.

SCROLL FOR NEXT