ಸಾಂದರ್ಭಿಕ ಚಿತ್ರ 
ದೇಶ

ಉಗ್ರ ಸಂಘಟನೆಗಳೊಂದಿಗೆ ನಂಟು, ಪಂಜಾಬ್ ನಲ್ಲಿ ಮೂವರು ವಿದ್ಯಾರ್ಥಿಗಳ ಬಂಧನ

ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಮೂವರು ವಿದ್ಯಾರ್ಥಿಗಳನ್ನು...

ಚಂಡಿಗಢ್/ಶ್ರೀನಗ: ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಮೂವರು ವಿದ್ಯಾರ್ಥಿಗಳನ್ನು ಬುಧವಾರ ಪಂಜಾಬ್ ನಲ್ಲಿ ಬಂಧಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ವಿಶೇಷ ಕಾರ್ಯಾಚರಣೆಯ ಪೊಲೀಸರು ಹಾಗೂ ಪಂಜಾಬ್ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಕಾಶ್ಮೀರದ ಅನ್ಸರ್ ಘಜ್ವತ್ ಉಲ್-ಹಿಂದ್(ಎಜಿಎಚ್) ಉಂಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಜಲಂಧರ್ ನ ಹೊರವಲಯದಲ್ಲಿರುವ ಸಿಟಿ ಇಂಜಿನಿಯರಿಂಗ್ ಮ್ಯಾನೇಜ್ಮೆಂಟ್ ಮತ್ತು ತಂತ್ರಜ್ಞಾನ ಸಂಸ್ಥೆ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಸುರೇಶ್ ಅರೋರಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಂಟಿ ಪೊಲೀಸ್ ತಂಡ ಇಂದು ಬೆಳಗ್ಗೆ ಹಾಸ್ಟೆಲ್ ಮೇಲೆ ದಾಳಿ ನಡೆಸಿದ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿದ್ದು, ಅವರಿಂದ ಎರಡು ರೈಫಲ್ ಹಾಗೂ ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಬಂಧಿತ ವಿದ್ಯಾರ್ಥಿಗಳನ್ನು ಝಹಿದ್ ಗುಲ್ಜಾರ್, ಇದ್ರಿಸ್ ಶಾಹ್ ಅಲಿಯಾಸ್ ನದೀಮ್ ಹಾಗೂ ಯೂಸುಫ್ ರಫಿಕ್ ಭಟ್ ಎಂದು ಗುರುತಿಸಲಾಗಿದೆ. ಬಂಧಿತ ಮೂವರು ವಿದ್ಯಾರ್ಥಿಗಳು ಕಾಶ್ಮೀರ ನಿವಾಸಿಗಳಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಫಾರ್ಮ್ 6'ರಲ್ಲಿ ಯಾವುದೇ ಬದಲಾವಣೆ ಇಲ್ಲ, ಈ ಕುರಿತು ರಾಹುಲ್ ಗಾಂಧಿಯದ್ದು ದಾರಿ ತಪ್ಪಿಸುವ ಹೇಳಿಕೆ: ಚುನಾವಣಾ ಆಯೋಗ

SIR ಫಾರ್ಮ್ 6 ಬದಲಾವಣೆಗಳಿಗೆ ಅನುಮೋದನೆ ನೀಡಿಲ್ಲ: CJI ಸ್ಪಷ್ಟನೆ; ಸುಪ್ರೀಂ ಕೋರ್ಟ್ ಹೇಳಿಕೆಯೂ CEC ಏಕಪಕ್ಷೀಯ ತೀರ್ಮಾನ ಅಂತ ದೃಢಪಡಿಸಿದೆ- ರಾಹುಲ್

ಕ್ರೀಡಾ ಸಾಧಕರಿಗೆ ಸಿಹಿ ಸುದ್ದಿ; ಸರ್ಕಾರಿ ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಶೇ. 2ರಷ್ಟು ಮೀಸಲಾತಿ: ಪರಮೇಶ್ವರ್

'ನನಗೆ ಆಶೀರ್ವಾದ ಮಾಡಿದಂತೆ ಯತೀಂದ್ರಗೂ ಮಾಡಿ': ಸಿದ್ದರಾಮಯ್ಯ ಭಾವುಕ ಮಾತಿಗೆ 'ಮತ್ತೆ ಚುನಾವಣೆಗೆ ನಿಲ್ಲಿ' ಎಂದ ಜನ; ಮಾಜಿ ಸಿಎಂ ಹೇಳಿದ್ದೇನು?

ಉಡುಪಿ ಕೃಷ್ಣ ಮಠದ ವಸತಿಗೃಹದಲ್ಲಿ ಮುಸ್ಲಿಂ ಯುವತಿಗೆ ವಸತಿ ನಿರಾಕರಣೆ; ಅಂಗಲಾಚಿದರೂ ಕರುಣೆ ತೋರದ ಸಿಬ್ಬಂದಿ: CPI(M) ಖಂಡನೆ