ನೊಯ್ಡಾ: ವಿವಾಹಿತ ಮಹಿಳೆಯೊಬ್ಬಳು ತನ್ನೊಡನೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ 13 ವರ್ಷದ ಬಾಲಕನ ಮರ್ಮಾಂಗವನ್ನೇ ಸುಟ್ಟ ಘಟನೆ ದೆಹಲಿ ಸಮೀಪದ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ.
ಶುಕ್ರವಾರ ನಡೆದ ಪ್ರಕರಣದಲ್ಲಿ ನೊಯ್ಡಾದ ಚಪ್ರೌಲ ಗ್ರಾಮದ ನಿವಾಸಿ ವಿವಾಹಿತ ಮಹಿಳೆ 13 ವರ್ಷದ ಬಾಲಕನನ್ನು ಮನೆಯಲ್ಲಿ ಬಲವಂತವಾಗಿ ಇರಿಸಿಕೊಂಡು ಆತನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಳು. ಬಾಲಕನೇನಾದರೂ ಪ್ರತಿರೋಧ ವ್ಯಕ್ತಪಡಿಸಿದರೆ ಬಿಸಿಯಾದ ಇಕ್ಕಳ ಇಲ್ಲವೇ ಬೇರೆ ಸಾಧನ ಬಳಸಿ ಆತನ ಮರ್ಮಾಂಗಕ್ಕೆ ಘಾಸಿ ಮಾಡುತ್ತಿದ್ದಳು.
ಈ ಕುರಿತಂತೆ ಆರೋಪಿ ಮಹಿಳೆಯ ವಿರುದ್ಧ ಸಂಸ್ತ್ರಸ್ಥ ಬಾಲಕನ ತಾಯಿ ಮಂಗಳವಾರ ಪೋಲೀಸರಿಗೆ ದೂರಿತ್ತಿದ್ದಾರೆ.ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಪೋಸ್ಕೋ ಕಾಯ್ದೆ ಸೇರಿ ಇನ್ನೂ ಅನೇಕ ಕಾಯ್ದೆಗಳಡಿಯಲ್ಲಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಎಲ್ಲಾ ಆಯಾಮಗಳಿಂದ ತನಿಖೆ ಕೈಗೊಂಡಿದ್ದಾರೆ.
ಮಹಿಳೆ ಸಂತ್ರಸ್ಥ ಬಾಲಕನ ನೆರೆಮನೆಯಲ್ಲಿಯೇ ವಾಸಿಸುತ್ತಿದ್ದು ಆಕೆ ವಿವಾಹಿತೆಯಾಗಿದ್ದರೂ ಪದೇ ಪದೇ ತನ್ನ ಮಗನೊಡನೆ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದರೆಂದು ಬಾಲಕನ ತಾಯಿ ದೂರಿದ್ದಾರೆ.
ಸದ್ಯ ಆರೋಪಿ ಮಹಿಳೆ ತಲೆಮರೆಸಿಕೊಂಡಿದ್ದು ಆಕೆಗಾಗಿ ಹುಡುಕಾಟ ನಡೆದಿದೆ ಎಂದು ಪೋಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.