ಸ್ವ ಘೋಷಿತ ದೇವ ಮಾನವ ರಾಂಪಾಲ್ 
ದೇಶ

ಎರಡು ಕೊಲೆ ಪ್ರಕರಣಗಳಲ್ಲಿ ಸ್ವಯಂ ಘೋಷಿತ ದೇವಮಾನವ ರಾಂಪಾಲ್ ಅಪರಾಧಿ: ಹರ್ಯಾಣ ಕೋರ್ಟ್ ತೀರ್ಪು

ಸ್ವಯಂ ಘೋಷಿತ ದೇವಮಾನವ ರಾಂಪಾಲ್ ನನ್ನು ಎರಡು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿ ...

ಹಿಸಾರ್(ಹರ್ಯಾಣ): ಸ್ವಯಂ ಘೋಷಿತ ದೇವಮಾನವ ರಾಂಪಾಲ್ ನನ್ನು ಎರಡು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿ ಹರ್ಯಾಣದ ಹಿಸಾರ್ ನ ನ್ಯಾಯಾಲಯ ಅಪರಾಧಿ ಎಂದು ಸಾಬೀತುಪಡಿಸಿದೆ. ಶಿಕ್ಷೆಯ ಪ್ರಮಾಣ ಇದೇ ತಿಂಗಳು 16 ಅಥವಾ 17ರಂದು ಪ್ರಕಟವಾಗುವ ನಿರೀಕ್ಷೆಯಿದೆ.

ಅಪಾರ ಅನುಯಾಯಿಗಳನ್ನು ಹೊಂದಿರುವ ರಾಂಪಾಲ್ ನನ್ನು ಹಿಸಾರ್ ನ ಕೇಂದ್ರ ಕಾರಾಗೃಹ-2ರಲ್ಲಿರಿಸಲಾಗಿದೆ.

2015ರಲ್ಲಿ ಪೊಲೀಸರು ಮತ್ತು ರಾಂಪಾಲ್ ನ ಭಕ್ತರ ನಡುವೆ ತೀವ್ರ ವಾದ-ವಿವಾದಗಳು ನಡೆದ ನಂತರ ಕೊನೆಗೂ ರಾಂಪಾಲ್ ನನ್ನು ಬಂಧಿಸಲಾಗಿತ್ತು. ಬಾರ್ವಾಲದಲ್ಲಿರುವ ರಾಂಪಾಲ್ ನ ಸತ್ಲೋಕ್ ಆಶ್ರಮದ ಹೊರಗೆ ನಾಲ್ವರು ಮಹಿಳೆಯರು ಮತ್ತು ಇಬ್ಬರು ಮಕ್ಕಳ ಶವ ಪತ್ತೆಯಾದ ಹಿನ್ನಲೆಯಲ್ಲಿ ರಾಂಪಾಲ್ ನನ್ನು ಬಂಧಿಸಲಾಗಿತ್ತು. ಮತ್ತೊಂದು ಬಾರಿ ಆಶ್ರಮದಲ್ಲಿ  ಮತ್ತೊಬ್ಬ ಮಹಿಳೆಯ ಶವ ಸಿಕ್ಕಿದ ಹಿನ್ನಲೆಯಲ್ಲಿ ರಾಂಪಾಲ್ ವಿರುದ್ಧ ಮತ್ತೊಂದು ಕೇಸು ದಾಖಲಾಗಿತ್ತು.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಸುಮಾರು 80 ಸಾಕ್ಷಿಗಳ ಹೇಳಿಕೆಯನ್ನು ಪಡೆಯಲಾಗಿದೆ ಎಂದು ಮಾಧ್ಯಮಗಳಲ್ಲಿ ಬಂದಿದೆ ಎಂದು ರಾಂಪಾಲ್ ಪರ ವಕೀಲ ಎಂಎಸ್ ನಾಯನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಯೆಟ್ನಾಂ ದೋಣಿ ದುರಂತ: 15 ಭಾರತೀಯ ಪ್ರವಾಸಿಗರು ಸಾವು; ತಮಿಳುನಾಡು, ಆಂಧ್ರ ಮಂದಿ ಸಮುದ್ರಪಾಲು; Video

INS Mahendragiri: ಪ್ರಾಜೆಕ್ಟ್ 17A; ಕೇವಲ 18 ತಿಂಗಳಲ್ಲಿ 6ನೇ ಯುದ್ಧನೌಕೆ ನೌಕಾಪಡೆಗೆ ಸೇರ್ಪಡೆ; Video

'ಕರಾವಳಿ' ವಿವಾದ: ಸುದೀರ್ಘ ಪೋಸ್ಟ್ ಹಾಕಿ, ವಾಟ್ಸಾಪ್ ಚಾಟಿಂಗ್ ಸ್ಕ್ರೀನ್ ಶಾಟ್ ಹಂಚಿಕೊಂಡ ಪ್ರಜ್ವಲ್ ದೇವರಾಜ್!

ಸರ್ಕಾರ ಉರುಳಿಸಲು BJP ಕುದುರೆ ವ್ಯಾಪಾರ; ಒಬ್ಬ ಶಾಸಕನಿಗೆ ಬರೋಬ್ಬರಿ 20-30 ಕೋಟಿ ರೂ ಆಫರ್: ಸಿಎಂ ಒಮರ್ ಅಬ್ದುಲ್ಲಾ ಆರೋಪ

EDಯಿಂದ ಅನಿಲ್ ಅಂಬಾನಿಗೆ ಸೇರಿದ 1,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹೆಚ್ಚುವರಿ ಆಸ್ತಿಗಳ ಮುಟ್ಟುಗೋಲು!