ದೇಶ

ಹೂಗ್ಲಿ: ಬಸ್ ಅಪಘಾತದಲ್ಲಿ ಆರು ಸಾವು, 20 ಮಂದಿಗೆ ಗಾಯ!

Nagaraja AB

ಹೂಗ್ಲಿ:  ಪಶ್ಚಿಮ ಬಂಗಾಳದ  ಹೂಗ್ಲಿ ಜಿಲ್ಲೆಯ ಹರಿಪಾಲ್ ಗ್ರಾಮದ ಸಮೀಪ ಬಸ್ ವೊಂದು ಕಾಲುವೆಗೆ ಬಿದ್ದು ಆರು ಮಂದಿ ಮೃತಪಟ್ಟಿದ್ದು, ಇತರ 20 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ತೃಣಮೂಲ ಕಾಂಗ್ರೆಸ್ ಶಾಸಕ ಬೆಚಾರಾಮ್ ಮನ್ನಾ ಪರಿಶೀಲನೆ ನಡೆಸಿದ್ದಾರೆ.

ಗಾಯಾಳುಗಳನ್ನು ಸಮೀಪದ  ಆಸ್ಪತ್ರೆಗೆ ದಾಖಲಿಸಲಾಗಿದೆ.  ಮತ್ತಷ್ಟು ಮೃತದೇಹಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು  ಶಾಸಕರು ತಿಳಿಸಿದ್ದಾರೆ. ಮತ್ತಷ್ಟು ಮಾಹಿತಿ ತಿಳಿದುಬರಬೇಕಾಗಿದೆ.

SCROLL FOR NEXT