ಸಂಗ್ರಹ ಚಿತ್ರ 
ದೇಶ

ಜಾಗತಿಕ ಹಸಿವಿನ ಸೂಚ್ಯಂಕ: ಭಾರತಕ್ಕೆ 103ನೇ ಸ್ಥಾನ!

ಜಾಗತಿಕ ಹಸಿವಿನ ಸೂಚ್ಯಾಂಕ(ಗ್ಲೋಬಲ್ ಹಂಗರ್ ಇಂಡೆಕ್ಸ್) ದಲ್ಲಿ ಬಾರತಕ್ಕೆ 103ನೇ ಸ್ಥಾನ ಲಭಿಸಿದೆ.

ಜಾಗತಿಕ ಹಸಿವಿನ ಸೂಚ್ಯಾಂಕ (ಗ್ಲೋಬಲ್ ಹಂಗರ್ ಇಂಡೆಕ್ಸ್) ದಲ್ಲಿ ಬಾರತಕ್ಕೆ 103ನೇ ಸ್ಥಾನ ಲಭಿಸಿದೆ.
Welthungerhilfe ಮತ್ತು Concern Worldwide ವರದಿಯಂತೆ , "ಗಂಭೀರ ಹಸಿವಿನ ಸಮಸ್ಯೆ" ಹೊಂದಿರುವ 45 ದೇಶಗಳಲ್ಲಿ ಭಾರತವೂ ಒಂದಾಗಿದೆ.
2017 ರಲ್ಲಿ ಭಾರತವು 100ನೇ ಸ್ಥಾನದಲ್ಲಿತ್ತು ಆದರೆ ಈ ಸ್ಥಾನವನ್ನು ಈ ವರ್ಷದ ಶ್ರೇಯಾಂಕದೊಡನೆ ಹೋಲಿಕೆ ಮಾಡಲಾಗುವುದಿಲ್ಲ ಎಂದು ಸಂಸ್ಥೆ ಹೇಳಿದೆ.
ಹಂಗರ್ ಇಂಡೆಕ್ಸ್ (ಜಿಹೆಚ್ಐ) 13ನೇ ವರ್ಷದ ಸೂಚ್ಯಾಂಕ ವನ್ನು ಬಿಡುಗಡೆಗೊಳಿಸಿದೆ. ಇದು ನಾಲ್ಕು ಪ್ರಮುಖ ಅಂಶಗಳಾದ - ಪೋಷಣೆಯ ಕೊರತೆ, ಶಿಶುಗಳ ಮರಣ, ಮಗುವಿನಲ್ಲಿ ಪೋಷಕಾಂಶದ ಕೊರತೆ ಹಾಗೂ ಮಗುವಿನ ಬೆಳವಣಿಗೆ ಕುಂಠಿತಗೊಳ್ಳುವುದನ್ನು ಆಧಾರವಾಗಿತ್ಟುಕೊಂಡು ಈ ಅಂಕಿ ಅಂಶವನ್ನು ತಯಾರಿಸಿದೆ.
ಇನ್ನು ಗಮನಾರ್ಹ ಸಂಗತಿಯೆಂದರೆ ಭಾರತದ ನೆರೆಹೊರೆಯ ರಾಷ್ಟ್ರಗಳಾದ ಚೀನಾ (25 ನೇ ಸ್ಥಾನ), ನೇಪಾಳ (72), ಮಯನ್ಮಾರ್ (68), ಶ್ರೀಲಂಕಾ (67) ಬಾಂಗ್ಲಾದೇಶ (86) ಸೇರಿ ಅನೇಕ ರಾಷ್ಟ್ರಗಳಿಗಿಂತ ಭಾರತ ಕೆಳಮಟ್ಟದಲ್ಲಿದೆ.
ವರದಿ ಪ್ರಕಾರ, ಸುಮಾರು 124 ದಶಲಕ್ಷ ಜನರು ಜಗತ್ತಿನಾದ್ಯಂತ ತೀವ್ರ ಹಸಿವಿನ ಸಮಸ್ಯೆಯಿಂದ ಬಳಲುಇತ್ತಿದ್ದಾರೆ. 
Welthungerhilfe ಎನ್ನುವುದು ಒಂದು ಲಾಭರಹಿತ ಸಂಸ್ಥೆಯಾಗಿದ್ದರೆ Concern Worldwide  ಬಡಜನರ ಜೀವನಮಟ್ಟ ಸುಧಾರಣೆಗಾಗಿ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT