ನವದೆಹಲಿ: ಪೆಟ್ರೋಲಿಯಂ ಕಂಪನಿಗಳು, ಮತ್ತೆ ತೈಲೆ ಬೆಲೆ ಏರಿಕೆ ಮಾಡಿದ್ದು, ಮಂಗಳವಾರ ಪೆಟ್ರೋಲ್ ಬೆಲೆಯಲ್ಲಿ 11 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 23 ಪೈಸೆ ಏರಿಕೆ ಮಾಡಿದೆ.
ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.82.383 ಹಾಗೂ ಡೀಸೆಲ್ 75.69ಕ್ಕೆ ತಲುಪಿದೆ. ಇದರೊಂದಿಗೆ ಕೇಂದ್ರ ಸರ್ಕಾರ ಅ.5ಕ್ಕೆ ಜಾರಿಗೆ ತರುವಂತೆ ತೈಲ ಬೆಲೆಯನ್ನು ರೂ.2.50 ನಷ್ಟು ಇಳಿಸಿ ಗ್ರಾಹಕರಿಗೆ ನೀಡಿದ್ದ ನೆರವಿನ ಹಸ್ತ ಸಂಪೂರ್ಣ ಮಾಯವಾಗಿದೆ. ಕಾರಣ ಅ.5ರ ಬಳಿಕ ಸತತ 11ನೇ ದಿನ ತೈಲ ಕಂಪನಿಗಳು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿವೆ.
ಕಳೆದ 11 ದಿನಗಳಲ್ಲಿ ಡೀಸೆಲ್ ಬೆಲೆ ರೂ.2.51ನಷ್ಟು ಏರಿಕೆಯಾಗಿದೆ. ಇದರೊಂದಿಗೆ ಸರ್ಕಾರ ಪ್ರಕಟಿಸಿದ್ದ ರೂ.2.50 ಇಳಿಕೆಯ ಲಾಭ ಗ್ರಾಹಕರಿಂದ ಕೈಜಾರಿದಂತಾಗಿದೆ.
ಅ.5 ರಂದು ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಲೀ.ಗೆ ರೂ.1.50ನಷ್ಟು ಇಳಿಸಿತ್ತು. ಜೊತೆಗೆ ತೈಲ ಕಂಪನಿಗಳಿಗೆ ರೂ.1 ಹೊರೆ ಹೊತ್ತುಕೊಳ್ಳುವಂತೆ ಸೂಚಿಸಿತ್ತು. ಹೀಗಾಗಿ ದೇಶದಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಲೀ.2.50ನಷ್ಟು ಉಳಿದಿತ್ತು. ಆದರೆ, ನಂತರದ 11 ದಿನಗಳಲ್ಲಿ ಡೀಸೆಲ್ ಬೆಲೆ ಮತ್ತೆ ಲೀ.ಗೆ 2.51ನಷ್ಟು ಏರಿಕೆಯಾಗಿದೆ.
ಕಳೆದ ವರ್ಷ ಡೀಸೆಲ್ ದವರನ್ನು ನಿತ್ಯ ಬದಲಾವಣೆ ಮಾಡುವ ನೀತಿ ಜಾರಿಗೆ ತಂದ ಬಳಿಕ ಇದು ಅತ್ಯಂತ ವೇಗದಲ್ಲಿ ಆಗಿರುವ ಏರಿಕೆಯಾಗಿದೆ. ಇದೇ ವೇಳೆ ಕಳೆದ 10 ದಿನಗಳಲ್ಲಿ ಪೆಟ್ರೋಲ್ ದರ ಲೀ.ಗೆ ರೂ.1.22ನಷ್ಟು ಏರಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics