ದೇಶ

ಅಸ್ಥಿರ ಮೈತ್ರಿ ಸರ್ಕಾರದಿಂದ ಅಭಿವೃದ್ದಿ ಸಾಧ್ಯವಿಲ್ಲ- ಅರುಣ್ ಜೇಟ್ಲಿ

Nagaraja AB

ನವದೆಹಲಿ: ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಹಾಗೂ ಬಡತನ ಮುಕ್ತಗೊಳಿಸಲು  ಸದೃಢವಾದ ನಾಯಕತ್ವದ ಅಗತ್ಯವಿದೆ ಎಂದು ಹೇಳಿರುವ ಕೇಂದ್ರ ಹಣಕಾಸು ಸಚಿವ ಅರುಣ್   ಜೇಟ್ಲಿ, ಅಸ್ಥಿರ ಮೈತ್ರಿ ಸರ್ಕಾರದಿಂದ ಅಭಿವೃದ್ದಿ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಅಸೋಚಾಮ್ ನ 98ನೇ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅರುಣ್ ಜೇಟ್ಲಿ,  ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಕೈಗೊಂಡ ಕ್ಷಿಪ್ರಗತಿಯ ನಿರ್ಧಾರದಿಂದ ಮೂಲಸೌಕರ್ಯ ಅಭಿವೃದ್ದಿ ಹಾಗೂ ಹಣಕಾಸು ಸೇವೆಯಲ್ಲಿ ಉಂಟಾಗಿದ್ದ ಸಮಸ್ಯೆ ನಿರ್ವಹಣೆಗೆ ನೆರವಾಯಿತು ಎಂದರು.

ಅಸ್ಥಿರವಾದ ಮೈತ್ರಿ ಸರ್ಕಾರದಿಂದ ಒಮ್ಮತದ ನೀತಿ ರೂಪಿಸಲು ಸಾಧ್ಯವಿಲ್ಲ. ನಿರ್ದೇಶಕತ್ವದಲ್ಲೂ ಹೊಂದಾಣಿಯ ಸಮಸ್ಯೆ ಎದುರಾಗಿ ಉತ್ತಮ ಆಡಳಿತ ದೊರೆಯಲು ಕಷ್ಟಸಾಧ್ಯ, ಆದರೆ, ಸ್ಪಷ್ಟ ಹಾಗೂ ಸದೃಢ ಸರ್ಕಾರದಿಂದ  ಮಾತ್ರ ದೇಶದಲ್ಲಿ ಕಂದಾಯ, ಮೂಲಸೌಕರ್ಯ ಉತ್ತಮಗೊಂಡು ಅಭಿವೃದ್ದಿಗೊಳ್ಳಲು ಸಾಧ್ಯ ಎಂದು ಹೇಳಿದರು.

2017-18ರ ಆರ್ಥಿಕ ವರ್ಷದಲ್ಲಿ ಶೇ.6. 7 ರಷ್ಟಿದ್ದ ದೇಶದ ಆರ್ಥಿಕ ಬೆಳವಣಿಗೆ ದರ ಏಪ್ರಿಲ್- ಜೂನ್ ತ್ರೈಮಾಸಿಕ ಅವಧಿಯಲ್ಲಿ ಶೇ, 8.2 ರಷ್ಟು ಏರಿಕೆ ಆಗಿದೆ. ಕೇಂದ್ರದಲ್ಲಿ ದುರ್ಬಲ ನಾಯಕತ್ವದಿಂದ ಮೂಲಸೌಕರ್ಯ ಅಭಿವೃದ್ದಿ ಹಾಗೂ ಹಣಕಾಸಿನ ಸಮಸ್ಯೆ ಎದುರಿಸಲು ಸಾಧ್ಯವಿಲ್ಲ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

SCROLL FOR NEXT