ರಾಯಪುರ: ನಾಗದೇವನ ಆಶೀರ್ವಾದ ಪಡೆಯಬೇಕೆಂದು ದಂಪತಿ ಮಗುವನ್ನು ಹಾವಾಡಿಗ ಸುಪರ್ದೀಗೆ ನೀಡಿದ್ದು ಈ ವೇಳೆ ವಿಷಪೂರಿತ ನಾಗರಹಾವು ಕಚ್ಚಿದ್ದರಿಂದ 5 ತಿಂಗಳ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.
ಮಗು ಪದೇ ಪದೇ ಅನಾರೋಗ್ಯಕ್ಕೀಡಾಗುತ್ತಿದ್ದು ಇದರಿಂದ ದಂಪತಿಗಳು ನೊಂದಿದ್ದರು. ಈ ಇದೇ ಹಾವಾಡಿಗನೊಬ್ಬ ನಾಗರ ದೇವನ ಆಚರಣೆ ಮಾಡಿದರೆ ನಿಮ್ಮ ಮಗುವಿನ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದ್ದಾನೆ. ಅದಕ್ಕೆ ಪೋಷಕರು ತಲೆಯಾಡಿಸಿದ್ದಾರೆ.
ಅದರಂತೆ ಹಾವಾಡಿಗ ಬಿಲ್ಲು ರಾಮ್ ಮಾರ್ಕಮ್ ನಾಗರಪೂಜೆಯನ್ನು ಆಯೋಜಿಸಿದ್ದ. ಧಾರ್ಮಿಕ ವಿಧಿವಿಧಾನ ನಡೆಸುತ್ತಿದ್ದಾಗ ಹಾವು ಮಗುವಿಗೆ ಕಚ್ಚಿದೆ. ಈ ವೇಳೆ ಹಾವಾಡಿಗ ಹಾವಿನ ವಿಷದ ಹಲ್ಲು ಕಿತ್ತುಹಾಕಲಾಗಿದೆ ಎಂದು ಹೇಳಿದ್ದಾನೆ. ಇದನ್ನು ನಂಬಿದ ದಂಪತಿಗಳು ಪೂಜೆಯಲ್ಲಿ ನಿರತರಾಗಿದ್ದಾರೆ. ಎರಡು ಗಂಟೆ ನಂತರ ಮಗುವಿನ ಉಸಿರಾಟ ಕ್ಷೀಣಿಸುತ್ತಿರುವುದನ್ನು ಕಂಡ ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಷ್ಟರಲ್ಲೇ ವಿಷ ಮಗುವಿನ ದೇಹಕ್ಕೆ ಸಂಪೂರ್ಣವಾಗಿ ವ್ಯಾಪಸಿ ಕೊನೆಯುಸಿರೆಳೆದಿದೆ.
ಈ ಘಟನೆ ನಂತರ ಸ್ಥಳೀಯರು ಬಿಲ್ಲು ರಾಮ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.