ನಾಗ್ಪುರ: ರಾಮ ಮಂದಿರ ನಿರ್ಮಾಣದ ಬಗ್ಗೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಮಾತನಾಡಿದ್ದು, ಆತ್ಮಗೌರವಕ್ಕಾಗಿ ರಾಮ ಮಂದಿರ ನಿರ್ಮಾಣವಾಗುವುದು ಅನಿವಾರ್ಯ ಈ ಹಿನ್ನೆಲೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಜಾರಿಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಮ ಮಂದಿರ ನಿರ್ಮಾಣ ದೇಶದ ಆತ್ಮಗೌರವಕ್ಕಾಗಿ ಅಗತ್ಯವಾಗಿದೆ. ಸೌಹಾರ್ದತೆ ಹಾಗೂ ಏಕತೆಗೆ ರಾಮ ಮಂದಿರ ದಾರಿ ಮಾಡಿಕೊಡಲಿದೆ ಎಂದು ಮೋಹನ್ ಭಾಗ್ವತ್ ಹೇಳಿದ್ದಾರೆ. ವಿಜಯದಶಮಿಯಂದು ನಾಗ್ಪುರದಲ್ಲಿ ಸಂದೇಶ ನೀಡಿರುವ ಮೋಹನ್ ಭಾಗ್ವತ್, ಮಾವೋವಾದಿಗಳು ಎಂದಿಗೂ ನಗರಗಳತ್ತಲೇ ಗಮನ ಹರಿಸುತ್ತಿದ್ದರು. ಅಂಧ ಅನುಯಾಯಿಗಳಿರುವ ದೇಶ ವಿರೋಧಿ ನಾಯಕತ್ವವನ್ನು ಸೃಷ್ಟಿಸುವುದೇ ನವ ಎಡಪಂಥದ ಉದ್ದೇಶವಾಗಿದೆ ಎಂದು ಮೋಹನ್ ಭಗವತ್ ಇದೇ ವೇಳೆ ಹೇಳಿದ್ದಾರೆ.
ಸಮಾಜದಲ್ಲಿ ದ್ವೇಷ ಮೂಡಿಸುವುದೇ ನಗರ ಮಾವೋವಾದಿಗಳ ಉದ್ದೇಶವಾಗಿದೆ. ದೇಶ ವಿರೋಧಿಗಳಿಂದ ಪ್ರೇರಣೆ ಪಡೆಯುವ ಮಾವೋವಾದಿಗಳು ತಾವು ಎಲ್ಲೇ ಹೋದರೂ ದೇಶಕ್ಕೆ ಅವಮಾನ ಮಾಡುತ್ತಾರೆ ಎಂದು ಮೋಹನ್ ಭಾಗ್ವತ್ ಆರೋಪ ಮಾಡಿದ್ದಾರೆ.