ಲಕ್ನೋ: ಈ ಮೊದಲು ಹೆಚ್ಚಿನ ಸಂಖ್ಯೆಯ ಹಿಂದೂ ನಾಯಕರು ನನ್ನನ್ನು ಚುನಾವಣಾ ಪ್ರಚಾರಕ್ಕಾಗಿ ಕರೆಯುತ್ತಿದ್ದರು. ಆದರೆ ಈಗ ಅವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಹೇಳಿದ್ದಾರೆ,
ತಾವು ಯುವ ನಾಯಕರಾಗಿದ್ದಾಗಿಂದಲೂ ದೇಶಾದ್ಯಂತ ಪಕ್ಷದ ಹಲವು ನಾಯಕರ ಪರವಾಗಿ ನಾನು ಪ್ರಚಾರ ಮಾಡಿದ್ದೇನೆ, ಅದರಲ್ಲಿ ಹಿಂದೂ ನಾಯಕರುಗಳು ಇದ್ದರು. ನಾನು ಯೂತ್ ಕಾಂಗ್ರೆಸ್ ನಾಯಕನಾದಾಗಿನಿಂದ, ಅಡಮಾನ್ ನಿಕೋಬಾರ್, ಸೇರಿ ದೇಶದ ಹಲವು ಭಾಗಗಳಲ್ಲಿ ಪ್ರಚಾರ ಕಾರ್ಯಕ್ರಮ ಮಾಡಿದ್ದೇನೆ, ಅದರಲ್ಲಿ ಶೇ. 95 ರಷ್ಟು ಹಿಂದುಗಳಿದ್ದರು, ಕೇವಲ ಶೇ,5 ರಷ್ಟು ಮಾತ್ರ ಮುಸ್ಲಿಂ ನಾಯಕರುಗಳಿದ್ದರು ಎಂದು ಹೇಳಿದ್ದಾರೆ,
ಆದರೆ ಕಳೆದ 4 ವರ್ಷಗಳಿಂದ ನಾನು ಅಂಕಿ ಅಂಶಗಳನ್ನು ಗಮನಿಸಿದ್ದೇನೆ, ಎಲ್ಲೋ ಕೆಲವು ಕಡೆ ತಪ್ಪಾಗಿದೆ, ಇಂದಿನ ದಿನಗಳಲ್ಲಿ ಜನ ನನ್ನನ್ನು ಪ್ರಚಾರಕ್ಕೆ ಕರೆಯಲು ಹಿಂದು ಮುಂದು ನೋಡುತ್ತಾರೆ.ಅವರ ವೋಟ್ ಬ್ಯಾಂಕ್ ಮೇಲೆ ಪರಿಣಾಮ ಬೀರುತ್ತದೆ ಎಂಬ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಜನರಲ್ಲಿ ಬಿಜೆಪಿ ಮೈಂಡ್ ಸೆಟ್ ಬದಲಾಯಿಸಿದೆ ಎಂದು ಹೇಳಿದ್ದಾರೆ.