ಪ್ರಧಾನಿಯ ಸ್ವಜನ ಪಕ್ಷಪಾತದಿಂದ ಐಎಎಫ್ ಪೈಲಟ್ ಗಳಿಗೆ ಸಂಕಷ್ಟ: ರಾಹುಲ್ ಗಾಂಧಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ರಕ್ಷಣಾ ಒಪ್ಪಂದಗಳನ್ನು ಮರುಪರಿಶೀಲನೆ ಮಾಡುವುದರತ್ತ ಹೆಚ್ಚು ಗಮನ ನೀಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಒಂದು ಹಂತಕ್ಕೆ ಬಂದು ನಿಂತಿದ್ದ ರಕ್ಷಣಾ ಒಪ್ಪಂದಗಳನ್ನು ಪ್ರಧಾನಿ ಮೋದಿ ಸರ್ಕಾರ ಅಂತಿಮಗೊಳಿಸುವುದರ ಬದಲಾಗಿ ಮರುಪರಿಶೀಲನೆ ಮಾಡಲು ಪ್ರಾರಂಭಿಸುತ್ತಿದೆ. ರಕ್ಷಣಾ ಒಪ್ಪಂದಗಳು ಶೀಘ್ರವೇ ಅಂತಿಮಗೊಳ್ಳದೇ ಹಳೆಯ ಯುದ್ಧ ವಿಮನಗಳನ್ನು ಅನಿವಾರ್ಯವಾಗಿ ಓಡಿಸುತ್ತಿರುವ ಪೈಲಟ್ ಗಳ ಜೀವವನ್ನು ಮೋದಿ ಸರ್ಕಾರ ಅಪಾಯಕ್ಕೆ ದೂಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮೋದಿ ಸರ್ಕಾರ ಸ್ವಜನ ಪಕ್ಷಪಾತದಿಂದಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ ಒಂದು ಹಂತಕ್ಕೆ ಬಂದಿದ್ದ ರಕ್ಷಣಾ ಒಪ್ಪಂದಗಳನ್ನು ಅಂತಿಮಗೊಳಿಸುತ್ತಿಲ್ಲ. ಇದರಿಂದಾಗಿ ಪೈಲಟ್ ಗಳ ಜೀವಕ್ಕೆ ಅಪಾಯ ಎದುರಾಗುತ್ತಿದೆ ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.