ತಿರುವನಂತಪುರಂ: ಭಾರೀ ವಿರೋಧದ ನಡುವೆಯೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದ ರೆಹಾನಾ ಫಾತಿಮಾ ಸುಲೈಮಾನ್ ಕಿಸ್ ಆಫ್ ಲವ್ ಕಾರ್ಯಕ್ರಮವೊಂದನ್ನು ಆಯೋಜಿಸಿ ವಿವಾದಕ್ಕೆ ಕಾರಣವಾಗಿದ್ದಳು.
ಈ ಹಿಂದೆ ಕಿಸ್ ಆಫ್ ಲವ್ ನಿಂದ ಸುದ್ದಿಯಾಗಿದ್ದ ರೆಹನಾ ಫಾತಿಮಾ ಅಯ್ಯಪ್ಪ ಮಾಲಾಧಾರಿಯ ಗೆಟಪ್‌ನಲ್ಲಿ ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ್ದಳು. ಇನ್ನು ಕೇರಳ ಸರ್ಕಾರ ರೆಹಾನಾಗೆ ಅಯ್ಯಪ್ಪ ಭಕ್ತಗಣದಿಂದ ರಕ್ಷಣೆ ನೀಡಲೆಂದು 250 ಪೊಲೀಸ್ ಕಮಾಂಡೋಗಳ ವ್ಯವಸ್ಥೆ ಮಾಡಲಾಗಿತ್ತು. ತಲೆಗೆ ಹೆಲ್ಮೆಟ್ ಹಾಗೂ ಪೊಲೀಸರ ರಕ್ಷಾ ಕವಚ ತೊಟ್ಟಿದ್ದ ರೆಹಾನಾ ದೇಗುಲ ಪ್ರವೇಶಕ್ಕೆ ಮುಂದಾಗಿದ್ದಳು.
ಆದರೆ ದೇವಸ್ಥಾನದ ಅರ್ಚಕರು ಭಾರೀ ವಿರೋಧ ವ್ಯಕ್ತಪಡಿಸಿ ಯಾರಾದರೂ ಒಳ ಹೋಗಲು ಯತ್ನಿಸಿದರೆ ಗರ್ಭಗುಡಿಗೆ ಬೀಗ ಜಡಿದು ಪಂದಳಂ ರಾಜಮನೆತನಕ್ಕೆ ಬೀಗ ಒಪ್ಪಿಸುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ರೆಹಾನಾ ಹಾಗೂ ಹೈದರಾಬಾದ್ ಮೂಲದ ಮಹಿಳಾ ವರದಿಗಾರ್ತಿ ಕವಿತಾ ಕೋಶಿ ದೇಗುಲ ಪ್ರವೇಶಸದೆ ಹಿಂತಿರುಗಿದ್ದರು.
ಇನ್ನು ರೆಹಾನಾ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಸ್ಯಾಂಡಲ್ವುಡ್ ಹಿರಿಯ ನಟ ಜಗ್ಗೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.