ದೇಶ

ಅಮೃತಸರ ರೈಲು ದುರಂತ ಪ್ರಕರಣದಲ್ಲಿ ಕೆಸರೆರಚಾಟ ನಿಲ್ಲಿಸಿ: ರಾಜಕೀಯ ಪಕ್ಷಗಳಿಗೆ ಸಿಧು

Manjula VN
ಅಮೃತಸರ: ಅಮೃತಸರ ರೈಲು ದುರಂದ ಪ್ರಕರಣದಲ್ಲಿ ಕೆಸರೆರಚಾಟ ಆಡುವನ್ನು ರಾಜಕೀಯ ಪಕ್ಷಗಳು ನಿಲ್ಲಿಸಬೇಕೆಂದು ಪಂಜಾಬ್ ಸಚಿವ ಹಾಗೂ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಶನಿವಾರ ಹೇಳಿದ್ದಾರೆ. 
ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳು ನಾಗರೀಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಾಯಾಳುಗಳನ್ನು ಭೇಟಿಯಾಗುವ ಸಲುವಾಗಿ ಸಿಧು ಅವರು ಇಂದು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. 
ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ನಿರ್ಲಕ್ಷ್ಯದಿಂದಾಗಿ ದುರ್ಘಟನೆ ಸಂಭವಿಸಿದೆ. ಆದರೆ, ಉದ್ದೇಶಪೂರ್ವಕವಾಗಿ ಯಾವುದನ್ನೂ ಮಾಡಿಲ್ಲ ಎಂದು ಹೇಳಿದ್ದಾರೆ. 
ನಿಜಕ್ಕೂ ಇಂದೂ ದುರಾದೃಷ್ಟಕರ ಘಟನೆ. ಹಬ್ಬವನ್ನು ಆಚರಿಸುವ ಸಲುವಾಗಿ ಜನರು ಸ್ಥಳಕ್ಕೆ ಬಂದಿದ್ದರು. ಆದರೆ, ದುರಂತ ಸಂಭವಿಸಿದೆ. ಇದೊಂದು ಅಪಘಾತ ಎಂಬುದನ್ನು ಎಲ್ಲರೂ ತಿಳಿಯಬೇಕು. ಘಟನೆ ಸಂಭವಿಸುವ ವೇಳೆ ಸಾಕಷ್ಟು ಮಂದಿ ರೈಲ್ವೇ ಹಳಿಗಳ ಮೇಲೆ ಹಾಗೂ ಕಲ್ಲುಗಳ ಮೇಲೆ ಕುಳಿತುಕೊಂಡಿದ್ದರು. ರಾವಣನನ್ನು ದಹನ ಮಾಡಿದಾಗ ಸಾಕಷ್ಟು ಮಂದಿ ಹಿಂದಕ್ಕೆ ತೆರಳಿ ರೈಲ್ವೇ ಹಳಿಗಳ ಮೇಲೆ ನಿಂತಿದ್ದಾರೆ. ಪಟಾಕಿ ಸಿಡಿದಿದ್ದರಿಂದಾರಿ ರೈಲುಗಳ ಶಬ್ಧ ಕೇಳಿಸಿಲ್ಲ. ಘಟನೆಯಲ್ಲಿ ನಿರ್ಲಕ್ಷ್ಯವಿದೆ. ಆದರೆ, ಉದ್ದೇಶಪೂರ್ವಕವಲ್ಲ ಎಂದು ತಿಳಿಸಿದ್ದಾರೆ. 
ಘಟನೆ ಬಳಿಕ ನಾನು ಮತ್ತು ನನ್ನ ಪತ್ನಿ ಇಬ್ಬರೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಸಂತ್ರಸ್ತರನ್ನು ವಿಚಾರಿಸಿದ್ದೇವೆ. ಇಂತಹ ಸಂದರ್ಭದಲ್ಲಿ ರಾಜಕೀಯ ಕೆಸರೆರಚಾಟ ಮಾಡುವುದು ಸರಿಯಲ್ಲ. ನಮ್ಮಿಂದ ಸಾಧ್ಯವಾದಷ್ಟು ನೆರವಿನ ಕಾರ್ಯಕ್ಕೆ ಸಹಾಯ ಮಾಡೋಣ. ಅಪಘಾತದಲ್ಲಿ ರಾಜಕೀಯ ಮಾಡಬಾರದು ಎಂದಿದ್ದಾರೆ. 
SCROLL FOR NEXT