ದೇಶ

ಅಮೃತಸರ ರೈಲು ದುರಂತ: ರೈಲು ಚಾಲಕನ ಬಂಧಿಸಿದ ಪಂಜಾಬ್ ಪೊಲೀಸರು

Manjula VN
ಅಮೃತಸರ: ಅಮೃತಸರ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲು ಚಾಲಕನನ್ನು ಪಂಜಾಬ್ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. 
ಲುಧಿಯಾನ ರೈಲ್ವೇ ನಿಲ್ದಾಣದ ಬಳಿ ರೈಲು ಚಾಲಕನನ್ನು ಬಂಧನಕ್ಕೊಳಪಡಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪಂಜಾಬ್ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 
ಘಟನೆ ಸಂಭವಿಸುವುದಕ್ಕೂ ಮುನ್ನ ಹಲವು ಬಾರಿ ಶಬ್ಧ ಮಾಡಲಾಗಿತ್ತು. ಗ್ರೀನ್ ಸಿಗ್ನಲ್ ನೀಡಲಾಗಿತ್ತು. ದಾರಿ ಸ್ಪಷ್ಟವಾಗಿದೆ ಎಂದು ಚಾಲನೆ ಮಾಡಿದ್ದೆವು. ಆದರೆ, ಹಳಿ ಮೇಲೆ ನೂರಾರು ಸಂಖ್ಯೆಯಲ್ಲಿ ಜನರಿರುವುದು ನಮಗೆ ತಿಲಿಯರಿಲ್ಲ ಎಂದು ವಿಚಾರಣೆ ವೇಳೆ ಚಾಲಕ ಹೇಳಿದ್ದಾನೆಂದು ತಿಳಿದುಬಂದಿದೆ. 
ಪಂಜಾಬ್ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದು, ಕಾರ್ಯಕ್ರಮವನ್ನು ಆಯೋಜಿಸಿದ್ದೂ ಕೂಡ ಕಾಂಗ್ರೆಸ್ ನಾಯಕರೇ ಆಗಿದ್ದಾರೆ. ಹೀಗಾಗಿ, ಕಾರ್ಯಕ್ರಮ ಆಯೋಜಕರ ವಿರುದ್ಧ ಅಧಿಕಾರಿಗಳು ಈ ವರೆಗೂ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಮಾತುಗಳು ಕೇಳಿ ಬರತೊಡಗಿವೆ. 
ಈ ನಡುವೆ ರೈಲ್ವೇ ಅಧಿಕಾರಿಗಳೂ ಕೂಡ ದುರ್ಘಟನೆಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಜೋರಾ ಫಟಕ್ ಪ್ರದೇಶದಲ್ಲಿ ರೈಲ್ವೇ ಲೈನ್ ಮ್ಯಾನ್ ಇದ್ದರೂ, ಚಾಲಕರಿಗೆ ಹಳಿ ಮೇಲೆ ನೂರಾರು ಸಂಖ್ಯೆಯಲ್ಲಿ ಜನರಿರುವ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂಬುದು ಇದೀಗ ಬೆಳಕಿಗೆ ಬಂದಿದೆ. 
SCROLL FOR NEXT