ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿದ್ದ ರೆಹಾನಾ ಫಾತಿಮಾ ಸುಲೈಮಾನ್ ಗೆ ಕೇರಳ ಮುಸ್ಲಿಂ ಜಮಾತ್ ಪರಿಷತ್ ಇಸ್ಲಾಂ ಧರ್ಮದಿಂದ ಉಚ್ಚಾಟನೆ ಮಾಡಿದೆ.
ರೆಹಾನಾ ಫಾತಿಮಾ ಸುಲೈಮಾನ್ ಅವರನು ಇಸ್ಲಾಂ ಧರ್ಮದಿಂದ ಉಚ್ಚಾಟನೆಗೊಳಿಸಿರುವುದರ ಬಗ್ಗೆ ಮುಸ್ಲಿಂ ಜಮಾತ್ ಪರಿಷತ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ರೆಹಾನಾ ಫಾತಿಮಾ ಸುಲೈಮಾನ್ ಅವರ ನಡೆ ಲಕ್ಷಾಂತರ ಹಿಂದೂಗಳು ಹಾಗೂ ಅವರ ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡಿದೆ. ಅಷ್ಟೇ ಅಲ್ಲದೇ ಈ ಹಿಂದೆ ಆಕೆ ಕಿಸ್ ಆಫ್ ಲವ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಿನಿಮಾಗಳಲ್ಲಿ ನಗ್ನವಾಗಿ ನಟಿಸಿದ್ದರು. ಮುಸ್ಲಿಂ ಹೆಸರನ್ನು ಬಳೆಕೆ ಮಾಡುವುದಕ್ಕೆ ರೆಹಾನಾಗೆ ಯಾವುದೇ ಹಕ್ಕಿಲ್ಲ ಎಂದು ಜಮಾತ್ ಪರಿಷತ್ ಹೇಳಿದೆ.
ಕೋಮು, ಧಾರ್ಮಿಕ ದ್ವೇಷ ಬಿತ್ತುತ್ತಿರುವ ರೆಹಾನಾ ವಿರುದ್ಧ ಸರ್ಕಾರ ಐಪಿಸಿ ಸೆಕ್ಷನ್ 153A ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಮುಸ್ಲಿಂ ಜಮಾತ್ ಪರಿಷತ್ ಹೇಳಿದೆ.