ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧ ಉಪನಿರ್ದೇಶಕ ರಾಕೇಶ್ ಅಸ್ತಾನ ಕಳೆದ ವಾರ ಮಾಡಿದ್ದ ಲಂಚ ಆರೋಪದ ಶುದ್ಧಸುಳ್ಳು ಹಾಗೂ ದುರುದ್ದೇಶಪೂರಿತದಿಂದ ಕೂಡಿವೆ ಎಂದು ಸಿಬಿಐ ಸಮರ್ಥಿಸಿಕೊಂಡಿದೆ.
ಅಲೋಕ್ ವರ್ಮಾ ಸುಮಾರು 10 ಪ್ರಕರಣಗಳಲ್ಲಿ ಹಲವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ಸಂಪುಟ ಕಾರ್ಯದರ್ಶಿ ಹಾಗೂ ಕೇಂದ್ರ ಜಾಗೃತ ಆಯೋಗಕ್ಕೆ ಅಸ್ತಾನ ಪತ್ರ ಬರೆದಿದ್ದರು.
ಮಾಂಸ ರಪ್ತುದಾರ ಮೊಹಿನ್ ಖುರೇಷಿ ತನಿಖೆ ಪ್ರಕರಣದಲ್ಲಿ ಉದ್ಯಮಿ ಸತೀಶ್ ಸನಾ ಅವರನ್ನು ಬಿಡುಗಡೆಗೊಳಿಸಲು ಅವರಿಂದ ಆಗಸ್ಟ್ 24 ರಂದು ವರ್ಮಾ ಎರಡು ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಆರೋಪಿಸಿದ್ದರು.
ಈ ಪ್ರಕರಣದಲ್ಲಿ ಸಾನಾ ಅವರನ್ನು ಬಂಧಿಸಲು ವರ್ಮಾ ತನ್ನ ತಂಡದ ಬಳಿ ಕೇಳಿಕೊಂಡಿದ್ದರು ಎಂದು ಅಸ್ತಾನ ಆರೋಪಿಸಿದ್ದ ಅಸ್ತಾನ, ಕೇಂದ್ರ ಜಾಗೃತ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಗುಜರಾತ್ ಕೇಡರ್ ನ ಅಧಿಕಾರಿಯಾಗಿರುವ ಅಸ್ತಾನ ಪ್ರಸ್ತುತ ಸಿಬಿಐನಲ್ಲಿ ಎರಡನೇ ಅತ್ಯುನ್ನತ ಹುದ್ದೆಯಲ್ಲಿದ್ದು, ನಿರ್ದೇಶಕ ಅಲೋಕ್ ವರ್ಮಾ ಅವರಿಂದ ನೀತಿ ನಿಯಮಗಳು ಉಲ್ಲಂಘನೆಯಾಗಿವೆ ಎಂದು ಆರೋಪಿಸಿದ್ದರು.
ವಿಶೇಷ ತನಿಖಾ ತಂಡದದಿಂದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಮಧ್ಯವರ್ತಿಗೆ ಲಂಚ ನೀಡಿದೆ ಎಂಬ ಸಾನಾ ಅವರ ಹೇಳಿಕೆ ಆಧಾರದ ಮೇಲೆ ಸಿಬಿಐ ಅಸ್ತಾನ, ಮತ್ತು ಅವರ ಉಪ ಪೊಲೀಸ್ ಸೂಪರಿಂಟೆಂಡೆಂಟ್ ದೇವೇಂದರ್ ಕುಮಾರ್, ಹಾಗೂ ಇಬ್ಬರು ಮಧ್ಯವರ್ತಿಗಳ ವಿರುದ್ಧ ಎಫ್ ಐಆರ್ ದಾಖಲಿಸಿತ್ತು.
ಸಾನಾ ಅವರನ್ನು ಬಂಧಿಸದಂತೆ ವರ್ಮಾ ತಡೆದಿದ್ದರು ಎಂಬುದು ಶುದ್ದ ಸುಳ್ಳು ಹಾಗೂ ದುರುದ್ದೇಶ ಪೂರಿತದಿಂದ ಕೂಡಿದೆ ಎಂದು ಸಿಬಿಐ ವಕ್ತಾರರರು ತಮ್ಮ ಹೇಳಿಕೆಯಲ್ಲಿ ಸ್ಪಷ್ಪಪಡಿಸಿದ್ದಾರೆ.