ದೇಶ

ಜಮ್ಮು-ಕಾಶ್ಮೀರ: ಶಾಲಾ ಕಾಲೇಜುಗಳಲ್ಲಿ ರಾಮಾಯಣ ಭಗವದ್ಗೀತೆಗೆ ಸಂಬಂಧಿಸಿದ ಸುತ್ತೋಲೆ ವಾಪಸ್

Srinivas Rao BV
ಜಮ್ಮು-ಕಾಶ್ಮೀರ: ರಾಮಾಯಣ, ಭಗವದ್ಗೀತೆಗಳ ಉರ್ದು ಆವೃತ್ತಿಯ ಪುಸ್ತಕಗಳನ್ನು ಪಡೆಯುವಂತೆ ಶಾಲಾ ಕಾಲೇಜುಗಳಿಗೆ ಕಳಿಸಲಾಗಿದ್ದ ಸುತ್ತೋಲೆಗಳನ್ನು ಜಮ್ಮು-ಕಾಶ್ಮೀರ ಸರ್ಕಾರ ವಾಪಸ್ ಪಡೆದಿದೆ. 
ರಾಜ್ಯದ ಮುಖ್ಯ ಕಾರ್ಯದರ್ಶಿಯ ಆದೇಶದ ಮೇರೆಗೆ ಶಾಲಾ ಕಾಲೇಜುಗಳಲ್ಲಿ ನಿರ್ದಿಷ್ಟ ಧಾರ್ಮಿಕ ಪುಸ್ತಕಗಳನ್ನು ಪರಿಚಯಿಸಲು ಸೂಚಿಸಲಾಗಿದ್ದ ಸುತ್ತೋಲೆಯನ್ನು ವಾಪಸ್ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  ಎಲ್ಲಾ ಶಿಕ್ಷಣ ಸಂಸ್ಥೆಗಳು ಹಾಗೂ ಶಾಲಾ ಕಾಲೇಜುಗಳು ಸರ್ವಾನಂದ್ ಪ್ರೇಮಿ  ಅವರು ಬರೆದಿರುವ ರಾಮಾಯಣ ಹಾಗೂ ಭಗವದ್ಗೀತೆಯ ಧಾರ್ಮಿಕ ಪುಸ್ತಕಗಳನ್ನು ಖರೀದಿಸುವಂತೆ ಅ.22 ರಂದು ಜಮ್ಮು-ಕಾಶ್ಮೀರದ ಸರ್ಕಾರ ಆದೇಶ ಹೊರಡಿಸಿತ್ತು.  
ಸುತ್ತೋಲೆಗೆ ವಿರೋಧ ವ್ಯಕ್ತಪಡಿಸಿದ್ದ ರಾಜಕೀಯ ನಾಯಕ ಓಮರ್ ಅಬ್ದುಲ್ಲಾ, ಬೇರೆ ಧಾರ್ಮಿಕ ಪುಸ್ತಕಗಳನ್ನು ನಿರ್ಲಕ್ಷಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.
SCROLL FOR NEXT