ನವದೆಹಲಿ: ಭಾರತದ ವಾಯುಗಡಿ ನಿಯಮ ಉಲ್ಲಂಘಿಸಿರುವ ಚೀನಾದ ಎರಡು ಹೆಲಿಕಾಪ್ಟರ್ ಗಳು, ಭಾರತ-ಚೀನಾ ನಡುವಿನ ಲೈನ್ ಆಫ್ ಆ್ಯಕ್ಚುಯಲ್ ಕಂಟ್ರೋಲ್ ಡಿ-ಫ್ಯಾಕ್ಟೋ ಗಡಿ ದಾಟಿ ಹಾರಾಡಿರುವ ಘಟನೆ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 27 ರಂದು ಈ ಘಟನೆ ನಡೆಸಿದ್ದು, ಸುಮಾರು 10 ನಿಮಿಷಗಳ ಕಾಲ ಚೀನಾದ ಹೆಲಿಕಾಪ್ಟರ್ ಗಳು ಹಾರಟ ನಡೆಸಿರುವುದಾಗಿ ವರದಿಗಳು ತಿಳಿಸಿವೆ.
ಲಡಾಕ್ ಹಾಗೂ ಟಿಬೆಟ್'ನ್ನು ಸಂಪರ್ಕಿಸುವ ಟ್ರೇಟ್ ಜಂಕ್ಷನ್ ಬಳಿ ಹೆಲಿಕಾಪ್ಟರ್ ಗಳು ಕಾಣಿಸಿಕೊಂಡಿದ್ದು, 10 ನಿಮಿಷಗಳ ಬಳಿಕ ಹಿಂತಿರುಗಿದವು ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.
ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಕೂಡ ವಾಯು ಗಡಿಯನ್ನು ಉಲ್ಲಂಘನೆ ಮಾಡಿತ್ತು. ಈ ಘಟನೆ ನಡೆದ ವಾರಗಳ ಬಳಿಕ ಇದೀಗ ಚೀನಾ ಕೂಡ ವಾಯುಗಡೆ ನಿಯಮವನ್ನು ಉಲ್ಲಂಘನೆ ಮಾಡಿದೆ.