ರಾಕೇಶ್ ಅಸ್ತಾನ, ಅಲೋಕ್ ವರ್ಮಾ
ನವದೆಹಲಿ: ಕಡ್ಡಾಯ ರಜೆಯ ಮೇಲೆ ತೆರಳಿರುವ ಅಲೋಕ್ ವರ್ಮಾ ಹಾಗೂ ರಾಕೇಶ್ ಅಸ್ತಾನ ಅವರು ಈಗಲೂ ಸಿಬಿಐ ನಿರ್ದೇಶಕ ಮತ್ತು ವಿಶೇಷ ನಿರ್ದೇಶಕರಾಗಿದ್ದಾರೆ ಎಂದು ಸಿಬಿಐ ಗುರುವಾರ ಸ್ಪಷ್ಟಪಡಿಸಿದೆ.
ಕೇಂದ್ರ ಜಾಗೃತ ಆಯೋಗ(ಸಿವಿಸಿ) ತನಿಖಾ ಸಂಸ್ಥೆಯ ಇಬ್ಬರು ಉನ್ನತ ಅಧಿಕಾರಿಗಳ ಅಧಿಕಾರ ಕಿತ್ತುಕೊಳ್ಳುವಂತೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಜಂಟಿ ನಿರ್ದೇಶಕ ಎಂ.ನಾಗೇಶ್ವರ್ ರಾವ್ ಅವರಿಗೆ ಹೆಚ್ಚುವರಿಯಾಗಿ ನಿರ್ದೇಶಕರ ಹೊಣೆ ನೀಡಿಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ನಾಗೇಶ್ವರ್ ರಾವ್ ಅವರು ಕೇವಲ ಮಧ್ಯಂತರ ನಿರ್ದೇಶಕರಾಗಿದ್ದು, ಅಲೋಕ್ ವರ್ಮಾ ಅವರೇ ಈಗಲೂ ನಿರ್ದೇಶಕರು ಮತ್ತು ರಾಕೇಶ್ ಅಸ್ತಾನ ವಿಶೇಷ ನಿರ್ದೇಶಕರು ಎಂದು ಹೇಳಿದ್ದಾರೆ.
ಸಿಬಿಐ ನಿರ್ದೇಶಕರ ಹಾಗೂ ವಿಶೇಷ ನಿರ್ದೇಶಕರ ವಿರುದ್ಧದ ಆರೋಪ ಪ್ರತ್ಯಾರೋಪದ ಬಗ್ಗೆ ಸಿವಿಸಿ ತನಿಖೆ ಮುಗಿಯುವರೆಗೆ ನಾಗೇಶ್ವರ್ ರಾವ್ ಅವರು ನಿರ್ದೇಶಕರ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics