ದೇಶ

827 ಪೋರ್ನ್ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡಲು ಕೇಂದ್ರ ಸರ್ಕಾರ ಸೂಚನೆ

Sumana Upadhyaya

ನವದೆಹಲಿ: ಉತ್ತರಾಖಂಡ ಹೈಕೋರ್ಟ್ ನ ಆದೇಶ ಪ್ರಕಾರ ಅಶ್ಲೀಲ ವಿಡಿಯೊ ಮತ್ತು ವಿಷಯಗಳನ್ನು ಹೊಂದಿರುವ 827 ಪೋರ್ನ್ ವೆಬ್ ಸೈಟ್ ಗಳನ್ನು ಮುಚ್ಚುವಂತೆ ಅಂತರ್ಜಾಲ ಸೇವಾ ಪೂರೈಕೆದಾರರಿಗೆ ಸರ್ಕಾರ ಆದೇಶ ನೀಡಿದೆ.

ಉತ್ತರಾಖಂಡ ಹೈಕೋರ್ಟ್ ನ ಆದೇಶದ ಪ್ರಕಾರ ಅಶ್ಲೀಲ ವಿಷಯಗಳನ್ನು ಒಳಗೊಂಡಿರುವ 857 ವೆಬ್ ಸೈಟ್ ಗಳನ್ನು ತಡೆಯೊಡ್ಡುವಂತೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(ಮೈಟಿ) ಅಂತರ್ಜಾಲ ಪೂರೈಕೆದಾರರಿಗೆ ತಿಳಿಸಿದೆ. ಇದೇ ಸಂದರ್ಭದಲ್ಲಿ ಯಾವುದೇ ಅಶ್ಲೀಲ ವಿಷಯಗಳು ಮತ್ತು ವಿಡಿಯೊಗಳನ್ನು ಹೊಂದಿರದ 30 ಪೋರ್ಟಲ್ ಗಳನ್ನು ಸಹ ಇಲಾಖೆ ಗುರುತಿಸಿದೆ.

ಉತ್ತರಾಖಂಡ ಹೈಕೋರ್ಟ್ ಕಳೆದ ತಿಂಗಳು ಸೆಪ್ಟೆಂಬರ್ 27ರಂದು ಈ ಆದೇಶ ಹೊರಡಿಸಿದೆ. ಅದನ್ನು ಮೈಟಿ ಅಕ್ಟೋಬರ್ 8ರಂದು ಸ್ವೀಕರಿಸಿದರು.

ಉತ್ತರಾಖಂಡ ಹೈಕೋರ್ಟ್ 857 ವೆಬ್ ಸೈಟ್ ಗಳನ್ನು ಮುಚ್ಚುವಂತೆ 2015ರ ಜುಲೈ 31ರಂದು ಹಳೆ ನೊಟೀಸ್ ನೀಡಿದೆ ಎಂದು ಮೈಟಿ ಮಾಹಿತಿ ತಂತ್ರಜ್ಞಾನ ಇಲಾಖೆಗೆ ತಿಳಿಸಿದೆ.

ಎಲ್ಲಾ ಇಂಟರ್​ನೆಟ್​ ಸೇವಾ ಪರವಾನಗಿ ಹೊಂದಿರುವವರು ತಕ್ಷಣವೇ 827 ಪೋರ್ನ್​ ವೆಬ್​ಸೈಟ್​ಗಳನ್ನು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ನಿರ್ದೇಶನದಂತೆ ಹಾಗೂ ಹೈಕೋರ್ಟ್​ ಆದೇಶದಂತೆ ಬ್ಲಾಕ್​ ಮಾಡಬೇಕೆಂದು ಟೆಲಿಕಾಮ್​ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಇಂಟರ್​ನೆಟ್​ ಸೇವೆ ಒದಗಿಸುವ ಕಂಪನಿಗಳಿಗೆ ಕಳುಹಿಸಲಾಗಿದೆ.

ಸೆಪ್ಟೆಂಬರ್​ 27, 2018 ರಂದು ಉತ್ತರಾಖಂಡ್ ಹೈಕೋರ್ಟ್ ಆದೇಶವನ್ನು ಹೊರಡಿಸಿತ್ತು. ಅಕ್ಟೋಬರ್​ 8 ರಂದು ಹೈಕೋರ್ಟ್​ ಆದೇಶವನ್ನು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಸ್ವೀಕರಿಸಿತ್ತು.

SCROLL FOR NEXT