ಪ್ರಕಾಶ್ ಜಾವ್ಡೇಕರ್ 
ದೇಶ

ಸಮಾಜ ವಿಜ್ಞಾನ ಸಂಶೋಧನೆ ಉತ್ತೇಜನಕ್ಕೆ ಕೇಂದ್ರದಿಂದ 800 ಕೋಟಿ ರೂ. ನಿಗದಿ

ಉನ್ನತ ಶಿಕ್ಷಣದಲ್ಲಿ ಸಂಶೋಧನೆಯನ್ನು ಮತ್ತಷ್ಟು ಉತ್ತೇಜನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ 800 ಕೋಟಿ ರು ಅನುದಾನ ನಿಗದಿ ...

ನವದೆಹಲಿ:  ಉನ್ನತ ಶಿಕ್ಷಣದಲ್ಲಿ ಸಂಶೋಧನೆಯನ್ನು ಮತ್ತಷ್ಟು ಉತ್ತೇಜನಗೊಳಿಸುವ ನಿಟ್ಟಿನಲ್ಲಿ  ಕೇಂದ್ರ ಮಾನವ ಸಂಪನ್ಮೂಲ ಇಲಾಖೆ 800 ಕೋಟಿ ರು ಅನುದಾನ ನಿಗದಿ ಪಡಿಸಿದೆ ಎಂದು ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ಸಮಾಜ ವಿಜ್ಞಾನದಲ್ಲಿ ಪ್ರಬಲ ಸಂಶೋಧನಾ ನೀತಿ ಜಾರಿಗೆ ತರಲು 414 ಕೋಟಿ ರು ಹಣ ನಿಗದಿ ಪಡಿಸಿತ್ತು,ಯೋಜನೆ ಉತ್ತೇಜಿಸಲು 418 ಕೋಟಿ ಹಣ ಹೆಚ್ಚುವರಿಯಾಗಿ ನಿಗದಿ ಪಡಿಸಿದೆ. 
ಭಾರತೀಯ ಹಾಗೂ ವಿದೇಶಿ ಸಹಯೋಗದಲ್ಲಿ ಸಮಾಜ ವಿಜ್ಞಾನ ಕ್ಷೇತ್ರದ ಎರಡು ವೆಬ್ ಪೋರ್ಟಲ್ ಗಳನ್ನು ಶೀಘ್ರವೇ ತೆರೆಯಲಾಗುವುದು ಎಂದು ಜಾವ್ಡೇಕರ್ ತಿಳಿಸಿದ್ದಾರೆ,ಈ ಪ್ರಾಜೆಕ್ಟ್ ಗಳಿಗೆ ನಿಷ್ಪಕ್ಷಪಾತವಾಗಿ ಅನುದಾನ ನೀಡಿ ಯೋಜನೆ ಗಳನ್ನು ಅನುಷ್ಠಾನಗೊಳಿಸುವುದು ಸವಾಲಿನ ಕೆಲಸವಾಗಿದೆ ಎಂದು ತಿಳಿಸಿದ್ದಾರೆ.
IMPRESS (ಸಮಾಜವಿಜ್ಞಾನದ ಪರಿಣಾಮಕಾರಿ ಸಂಶೋಧನಾ ನೀತಿ)  ಮೂಲಕ ಎಲ್ಲಾ ರಾಜ್ಯಗಳಿಗೆ ಹಣ ನೀಡಲಾಗುವುದು. ಈ ಹಣವನ್ನು ನಗರ ರೂಪಂತರಕ್ಕೆ, ಮಾಧ್ಯಮ, ಸಂಸ್ಕೃತಿ, ಗ್ರಾಮೀಣ ರೂಪಾಂತರ.ಸರ್ಕಾರದ ಆವಿಷ್ಕಾರ, ಕೃಷಿ,ಮತ್ತು ಗ್ರಾಮೀಣಾಭಿವೃದ್ಧಿ, ಸಾಮಾಜಿಕ ಮಾಧ್ಯಮ ಮತ್ತಿತರ ಕ್ಷೇತ್ರಗಳ ಅಭಿವೃದ್ಧಿಗೆ ಗಮನ ನೀಡಲಾಗುವುದು,ಭಾರತ ಮತ್ತು ವಿದೇಶಿ ವಿವಿಗಳ ಸಹಯೋಗದಲ್ಲಿ  ಸಂಶೋಧನಾ ಸಂಸ್ಥೆ ಸಬಲಗೊಳಿಸಲು  ನಿರ್ಧರಿಸಲಾಗಿದೆ.
ಮೂರು ವರ್ಗಗಳಲ್ಲಿ ಈ ಯೋಜನೆಗೆ 418 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಕರಗಾಪರ ಐಐಟಿ ನಿರೇದಶಕ ಚಕ್ರವರ್ತಿ ಹೇಳಿದ್ದಾರೆ. ಭಾರತದ ಮೊದಲ ನೂರು ಸಂಸ್ಥೆಗಳು ಈ ಯೋಜನೆ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ, ಯೋಜನೆಗೆ ಆಯ್ಕೆ ಮಾಡಲು ರ್ಯಾಂಕಿಂಗ್ ಮಾನದಂಡವಾಗಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್