Deport undocumented Bangladeshi immigrants, AASU adviser dares BJP
ನವದೆಹಲಿ: ಎನ್ ಆರ್ ಸಿಯಲ್ಲಿ ದಾಖಲಾಗದ ಅಕ್ರಮ ಬಾಂಗ್ಲಾದೇಶಿಗಳನ್ನು ಮುಲಾಜಿಲ್ಲದೇ ಗಡಿಪಾರು ಮಾಡಿ ಎಂದು ಅಸ್ಸಾಂ ನ ವಿದ್ಯಾರ್ಥಿ ಒಕ್ಕೂಟದ ಮುಖ್ಯ ಸಲಹೆಗಾರ ಸಂಜುಜಾಲ್ ಭಟ್ಟಾಚಾರ್ಯ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಎನ್ ಆರ್ ಸಿ ಕುರಿತು ನಡೆದ ಪ್ಯಾನಲ್ ಚರ್ಚೆಯಲ್ಲಿ ಭಟ್ಟಾಚಾರ್ಯ ಬಿಜೆಪಿ ಸವಾಲು ಹಾಕಿದ್ದು, ಎನ್ ಆರ್ ಸಿ ಪ್ರಾರಂಭವಾಗುವುದಕ್ಕೂ ಮುನ್ನ ಇದು ಮುಸ್ಲಿಮರು ಹಾಗೂ ಬೆಂಗಾಲಿಗಳ ವಿರುದ್ಧದ ಮಸೂದೆ ಎಂಬ ಅಭಿಪ್ರಾಯವಿತ್ತು. ಆದರೆ ಸುಪ್ರೀಂ ಕೋರ್ಟ್ ಖುದ್ದು ಮೇಲ್ವಿಚಾರಣೆ ನಡೆಸುವುದಾಗಿ ಹೇಳಿದ ನಂತರ ಈ ಬಗ್ಗೆ ಜನಸಾಮಾನ್ಯರಲ್ಲಿ ಯಾವುದೇ ಅನುಮಾನಗಳೂ ಇಲ್ಲ ಎಂದು ಭಟ್ಟಾಚಾರ್ಯ ಹೇಳಿದ್ದಾರೆ.
ಈಗ ಬಿಜೆಪಿಗೆ ಧೈರ್ಯವಿರುವುದೇ ಆದರೆ ಎನ್ ಆರ್ ಸಿಯಲ್ಲಿ ಯಾರ ಹೆಸರುಗಳಿಲ್ಲವೋ ಅವರನ್ನು ಗಡಿಪಾರು ಮಾಡಬೇಕು ಎಂದು ಸಂಜುಜಾಲ್ ಭಟ್ಟಾಚಾರ್ಯ ಬಿಜೆಪಿಗೆ ಸವಾಲು ಹಾಕಿದ್ದಾರೆ. 1948-1971 ರಿಂದ ಅಸ್ಸಾಂ ಅಕ್ರಮ ಬಾಂಗ್ಲಾ ವಲಸಿಗರ ಸಮಸ್ಯೆಯನ್ನು ತಡೆದುಕೊಂಡಿತ್ತು ಆ ನಂತರ ತಡೆದುಕೊಳ್ಳಲು ಸಾಧ್ಯವಾಗದೇ ಚಳುವಳಿ ನಡೆಸಲಾಯಿತು. ಈಗ ಬಿಜೆಪಿಗೆ ಧೈರ್ಯವಿದ್ದರೆ ದಾಖಲೆಗಳಿಲ್ಲದ ಬಾಂಗ್ಲಾದೇಶಿಗಳನ್ನು ಗಡಿಪಾರು ಮಾಡಲಿ ಎಂದು ಹೇಳ್ದಿದಾರೆ.