ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪಾಕಿಸ್ತಾನದಲ್ಲಿ ಇಳಿದ ಇಸ್ರೇಲ್ ಜೆಟ್: ಸರ್ಕಾರಕ್ಕೆ ಪೀಕಲಾಟ!

ಪಾಕಿಸ್ತಾನದಲ್ಲಿ ಇಸ್ರೇಲ್ ನ ಖಾಸಗಿ ಜೆಟ್ ಭೂಸ್ಪರ್ಶ ಮಾಡಿದ್ದು ಕೋಲಾಹಲ ಉಂಟು ಮಾಡಿದೆ.

Israeli jet landing reports create uproar in Pak, govt denies
Srinivas Rao BV
Updated On : 28 Oct 2018, 2:33 am
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇಸ್ರೇಲ್ ನ ಖಾಸಗಿ ಜೆಟ್ ಭೂಸ್ಪರ್ಶ ಮಾಡಿದ್ದು ಕೋಲಾಹಲ ಉಂಟು ಮಾಡಿದೆ.   
ಆದರೆ ಸರ್ಕಾರ ಮಾತ್ರ ಮಾಧ್ಯಮಗಳಿಗೆ ಇಸ್ರೇಲ್ ಜೆಟ್ ಯಾವುದೂ ತನ್ನ ನೆಲದಲ್ಲಿ ಭೂಸ್ಪರ್ಶ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಮಧ್ಯೆ ಇಸ್ರೇಲ್ ನ ಪತ್ರಿಕೆಯ ಆಂಗ್ಲ ಆವೃತ್ತಿಯ ಸಂಪಾದಕರೊಬ್ಬರು ಇಸ್ರೇಲ್ ನ ಜೆಟ್ ಪಾಕಿಸ್ತಾನದಲ್ಲಿ ಭೂಸ್ಪರ್ಶ ಮಾಡಿರುವ ಬಗ್ಗೆ ಟ್ವೀಟ್ ಮಾಡಿದ್ದು ಮಾಹಿತಿಯನ್ನೂ ಬಹಿರಂಗಪಡಿಸಿದ್ದಾರೆ. 
ಪಾಕಿಸ್ತಾನದಲ್ಲಿ ಇಳಿದಿದ್ದ ಇಸ್ರೇಲ್ ವಾಣಿಜ್ಯ ವಿಮಾನವೊಂದು 10 ಗಂಟೆಗಳ ಕಾಲ ಸಂಪರ್ಕದಲ್ಲಿ ಸಿಕ್ಕಿರಲಿಲ್ಲ, ಆ ನಂತರ ವಾಪಸ್ ಟೆಲ್ ಅವೀವ್ ಗೆ ಬಂದಿದೆ ಎಂದು ಇಸ್ರೇಲ್ ನ ಪತ್ರಿಕೆಯ ಸಂಪಾದಕರು ಟ್ವೀಟ್ ಮಾಡಿದ್ದಾರೆ. 

Advertisement

Advertisement

ಪಾಕಿಸ್ತಾನ-ಇಸ್ರೇಲ್ ನಡುವೆ ಹೇಳಿಕೊಳ್ಳುವಂತಹ ದ್ವಿಪಕ್ಷೀಯ ಸಂಬಂಧ ಇಲ್ಲ. ಹೀಗಿದ್ದರೂ ಇಸ್ರೇಲ್ ನ ವಿಮಾನವೊಂದು ಇಸ್ಲಾಮಾಬಾದ್ ನಲ್ಲಿ ಬಂದಿಳಿದು 10 ಗಂಟೆಗಳ ಕಾಲ ಸಂಪರ್ಕಕ್ಕೇ ಸಿಗದೇ ಇತ್ತು ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆಯೇ  ಪಾಕಿಸ್ತಾನದಲಿ ಕೋಲಾಹಲ ಉಂಟಾಗುವಂತೆ ಮಾಡಿದೆ.  ಪಾಕಿಸ್ತಾನದ ಸರ್ಕಾರ ಸ್ಪಷ್ಟನೆ ನೀಡಿದ ಬಳಿಕವೂ ಪತ್ರಿಕೆಯ ಸಂಪಾದಕ ತನ್ನ ವಾದವನ್ನು ಮುಂದುವರೆಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement