ಯುಪಿಎಯನ್ನು ಟೀಕಿಸಲು ಹೋಗಿ ತನ್ನ ನಾಯಕನ್ನೇ ಟೀಕಿಸಿದ ಬಿಜೆಪಿ! 
ದೇಶ

ಯುಪಿಎಯನ್ನು ಟೀಕಿಸಲು ಹೋಗಿ ತನ್ನ ನಾಯಕನನ್ನು ಟೀಕಿಸಿದ ಬಿಜೆಪಿ!

ಈಗ ತಮ್ಮೊಂದಿಗೇ ಇರುವ ನಾಯಕರು ಹಿಂದೊಮ್ಮೆ ವಿರೋಧಪಕ್ಷದಲ್ಲಿದ್ದುಕೊಂಡು ಮಾಡಿದ್ದ ಯಡವಟ್ಟುಗಳನ್ನು ಟೀಕಿಸುವಾಗ ಪಕ್ಷಾಂತರದ ನಿಜವಾದ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ತಾಜಾ

ಹೈದರಾಬಾದ್: ರಾಜಕೀಯ ನಾಯಕರೇನೋ ಸುಲಭವಾಗಿ ಪಕ್ಷ ಬದಲಾವಣೆ ಮಾಡಿಬಿಟ್ಟಿರುತ್ತಾರೆ. ಆದರೆ ಈಗ ತಮ್ಮೊಂದಿಗೇ ಇರುವ ನಾಯಕರು ಹಿಂದೊಮ್ಮೆ ವಿರೋಧಪಕ್ಷದಲ್ಲಿದ್ದುಕೊಂಡು ಮಾಡಿದ್ದ ಯಡವಟ್ಟುಗಳನ್ನು ಟೀಕಿಸುವಾಗ ಪಕ್ಷಾಂತರದ ನಿಜವಾದ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಯುಪಿಎ ವಿರುದ್ಧದ ಬಿಜೆಪಿಯ ಟೀಕೆ. 
ವಿಷಯ ಏನಪ್ಪಾ ಅಂದ್ರೆ ಹಿಂದೊಮ್ಮೆ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಎಸ್ ಎಂ ಕೃಷ್ಣ, ವಿಶ್ವಸಂಸ್ಥೆಯಲ್ಲಿ ತಮ್ಮ ಭಾಷಣ ಓದುವ ಬದಲು ಬೇರೆಯ ದೇಶದ ವಿದೇಶಾಂಗ ಮಂತ್ರಿಗಳ ಭಾಷಣ ಓದಿ ಯಡವಟ್ಟು ಮಾಡಿಕೊಂಡಿದ್ದರು. ಅಂದು ಕಾಂಗ್ರೆಸ್ ನಲ್ಲಿದ್ದ ಎಸ್ ಎಂ ಕೃಷ್ಣ ಈಗ ಬಿಜೆಪಿಯಲ್ಲಿದ್ದಾರೆ. ಯುಪಿಎ ಸರ್ಕಾರದಲ್ಲಿನ ವೈಫಲ್ಯಗಳನ್ನು ಟೀಕಿಸುವ ಭರದಲ್ಲಿ ಬಿಜೆಪಿ ನಾಯಕ ರಾಮ್ ಮಾಧವ್ "ಇಂದು ಪ್ರಧಾನಿ ಮೋದಿ ಹಾಗೂ ಸುಷ್ಮಾ ಸ್ವರಾಜ್ ಜಾಗತಿಕ ಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸುವುದಕ್ಕೆ ಶ್ರಮಿಸುತ್ತಿದ್ದಾರೆ, ಆದರೆ ಯುಪಿಎ ಸರ್ಕಾರದಲ್ಲಿದ್ದ ನಮ್ಮ ವಿದೇಶಾಂಗ ಸಚಿವರು ನಮ್ಮ ದೇಶದ ಭಾಷಣ ಓದುವುದನ್ನು ಬಿಟ್ಟು ಬೇರೆಯವರ ಭಾಷಣ ಓದಿ ಮುಜುಗರ ಉಂಟು ಮಾಡಿ, ಹಾಸ್ಯದ ವಸ್ತುವಾಗಿದ್ದರು" ಎಂದು ಹಳೆಯದ್ದನ್ನು ಕೆದಕಿದ್ದಾರೆ.    
ರಾಮ್ ಮಾಧವ್ ಅವರು ಯುಪಿಎ ಸರ್ಕಾರವನ್ನು ಟೀಕಿಸಲು ಹೋಗಿ ಎಸ್ ಎಂ ಕೃಷ್ಣ ಅವರು ಮಾಡಿದ್ದ ಯಡವಟ್ಟಿನ ಬಗ್ಗೆ ಲೇವಡಿ ಮಾಡಿದ್ದಾರೆ. ಎಸ್ ಎಂ ಕೃಷ್ಣ  ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.  2011 ರಲ್ಲಿ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಬೇಕಿದ್ದ ಎಸ್ ಎಂ ಕೃಷ್ಣ ಪೋರ್ಚುಗೀಸ್ ಸಚಿವರ ಭಾಷಣ ಓದಿ ಸುದ್ದಿಯಾಗಿದ್ದರು. ಈಗ ರಾಮ್ ಮಾಧವ್ ಟೀಕೆಯನ್ನು ಕೇಳಿಸಿಕೊಂಡಿರುವವರು ಕಾಂಗ್ರೆಸ್ ನಲ್ಲಿದ್ದ ಎಸ್ ಎಂ ಕೃಷ್ಣ ಅವರನ್ನೋ ಅಥವಾ ಯುಪಿಎ ಸರ್ಕಾರವನ್ನೋ ಎಂಬ ಕನ್ಫ್ಯೂಷನ್ ನಲ್ಲಿದ್ದಾರೆ.! 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!