ದೇಶ

ಅಮಿತ್ ಶಾ ಹೇಳಿಕೆ ಶಬರಿಮಲೆಯಲ್ಲಿ ಹಿಂಸಾಚಾರಕ್ಕೆ ಯಾರು ಕಾರಣ ಎಂಬುದನ್ನು ತೋರಿಸುತ್ತದೆ: ಸಿಪಿಐ-ಎಂ

Srinivas Rao BV
ತಿರುವನಂತಪುರಂ: ಶಬರಿಮಲೆಯಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇರಳದ ಆಡಳಿತಾರೂಢ ಪಕ್ಷ ಸಿಪಿಐ-ಎಂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದೆ. 
ಹಿಂಸಾಚಾರಕ್ಕೆ ಕಾರಣ ಯಾರು ಎಂಬುದನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೇಳಿಕೆಯೇ ತೋರಿಸುತ್ತದೆ ಎಂದು ಸಿಪಿಐ-ಎಂ ಪಾಲಿಟ್ ಬ್ಯೂರೋ ಹೇಳಿದೆ.  ಸ್ವಾಮಿ ಸಂದೀಪಾನಂದ ಗಿರಿ ಅವರ ಆಶ್ರಮದ ಮೇಲೆ ನಡೆದಿರುವ ಖಂಡನಾರ್ಹ ದಾಳಿಗೂ ಅಮಿತ್ ಶಾ ಅವರ ಹೇಳಿಕೆಯೇ ಪ್ರಚೋದನೆ. ಸುಪ್ರೀಂ ಕೋರ್ಟ್ ತೀರ್ಪನ್ನೇ ಟೀಕಿಸುವಂತಿರುವ ಅಮಿತ್ ಶಾ ಅವರ ಹೇಳಿಕೆ ಸಂವಿಧಾನ ಹಾಗೂ ಸುಪ್ರೀಂ ಕೋರ್ಟ್ ನಿಂದನೆ ಎಂದು ಹೇಳಿದೆ. 
ಶಬರಿಮಲೆ ದೇವಾಲಯದ ಸಂಪ್ರದಾಯಗಳನ್ನು ಮುರಿದರೆ ಕೇರಳ ಸರ್ಕಾರವನ್ನು ಕಿತ್ತೊಗೆಯಬೇಕಾಗುತ್ತದೆ ಎಂದು ಅಮಿತ್ ಶಾ ಎಚ್ಚರಿಸಿದ್ದರು. ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸುವುದಕ್ಕಾಗಿ ಕೇರಳ ಸರ್ಕಾರವನ್ನು ಕಿತ್ತೊಗೆಯಬೇಕಾಗುತ್ತದೆ ಎಂಬ ಹೇಳಿಕೆ ಪ್ರಜಾಪ್ರಭುತ್ವದ ವಿರೋಧಿಯಾಗಿದೆ ಎಂದು ಸಿಪಿಐ-ಎಂ ಆರೋಪಿಸಿದ್ದು ಕೇರಳದ ಜನತೆ ಬಿಜೆಪಿ-ಆರ್ ಎಸ್ಎಸ್ ನ್ನುಒಪ್ಪುವುದಿಲ್ಲ ಎಂದು ಹೇಳಿದೆ. 
SCROLL FOR NEXT